Tuesday, June 9, 2026
Home ಆರೋಗ್ಯದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

ದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

by Dharmaraju
0 comments

ಎರಡು ವಾರಗಳ ಅಂತರದಲ್ಲಿ ಸತತವಾಗಿ ಮೂರು ಬಾರಿ ತೈಲ ಬೆಲೆಗಳು ಏರಿಕೆಯಾಗಿ ಜನ ಹೈರಾಣಾಗಿದ್ದು, ಇಂದು ಮತ್ತೆ ಏರಿಕೆ ಆಗುವ ಮೂಲಕ ಜನರಿಗೆ ಮತ್ತೊಮ್ಮೆ ಶಾಕ್ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರಗಳು ಮತ್ತೆ ದುಬಾರಿಯಾಗಿವೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2.61 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 2.71 ರೂಪಾಯಿಯಷ್ಟು ಹೆಚ್ಚಳ ಮಾಡಿವೆ.
ಕಳೆದ ಎರಡು ವಾರಗಳಲ್ಲಿ ತೈಲ ದರ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಬೆಲೆ ಏರಿಕೆಯ ನಂತರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.12 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 95.20 ರೂಪಾಯಿಗೆ ಏರಿಕೆಯಾಗಿದೆ.

ಎಷ್ಟು ಏರಿಕೆಯಾಯಿತು?

ಹೊಸ ದರಗಳ ಪ್ರಕಾರ

ಪೆಟ್ರೋಲ್:ಪ್ರತಿ ಲೀಟರ್ಗೆ ಸುಮಾರು ₹3 (ನಗರಾನುಸಾರ ₹2.46 – ₹2.87)

ಡೀಸೆಲ್:ಪ್ರತಿ ಲೀಟರ್ಗೆ ಸುಮಾರು ₹3 (₹2.57 – ₹2.81)

CNG:ಪ್ರತಿ ಕೆಜಿಗೆ ₹1 ಏರಿಕೆ (ಇತ್ತೀಚಿನ ದಿನಗಳಲ್ಲಿ 3ನೇ ಬಾರಿ ಏರಿಕೆ, ಒಟ್ಟು ₹4 ಏರಿಕೆ)

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದೇ ಈ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ತೈಲ ಆಮದು ವೆಚ್ಚ ಹೆಚ್ಚಾಗಿ, ಸರ್ಕಾರಿ ತೈಲ ಕಂಪನಿಗಳಿಗೆ ಆರ್ಥಿಕ ಒತ್ತಡ ಉಂಟಾಗಿದೆ. ಈ ಹಿನ್ನೆಲೆ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಇಂಧನ ದರ ಏರಿಕೆಯ ಪರಿಣಾಮ ಕೇವಲ ವಾಹನ ಸವಾರರ ಮೇಲಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಯ ಮೇಲೂ ಬೀಳುವ ಸಾಧ್ಯತೆ ಇದೆ. ಸಾರಿಗೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಬಹುದು.

You may also like

Leave a Comment