Saturday, July 11, 2026
Home ರಾಜಕೀಯ ‌ಸುದ್ದಿಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

by Dharmaraju
0 comments

ಕೆ.ಆರ್.ಪುರ : ಮೋದಿ ಅಂತಹ ಅಗ್ರಗಣ್ಯನಾಯಕ ಭಾರತಕ್ಕೆ ಸಿಕ್ಕಿರುವುದು ಭಾರತೀಯರ ಪುಣ್ಯ , ದಶಕಗಳೇ ಕಳೆದರೂ ಮೋದಿ ಆಡಳಿತ ಮುಂದಿನ ಪೀಳಿಗೆಗೆ ಭದ್ರ ಬುನಾದಿ ಎಂದು ಶಾಸಕ‌ ಬೈರತಿ ಬಸವರಾಜ ಅವರು ತಿಳಿಸಿದರು .

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12ವರ್ಷ ಪೂರ್ಣ ಗೊಳಿಸಿದ ಹಿನ್ನಲೆಯಲ್ಲಿ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರದ ಆಂಜನೇಯ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿ, ನಂತರ ದೇವಾಲಯದ ಬಳಿ ಸಂಭ್ರಮಾಚರಣೆ ಮಾಡಿ ಸಾರ್ವಜನಿಕರಿಗೆ ಸಿಹಿ‌ ವಿತರಿಸಿ ಮಾತನಾಡಿದ ಅವರು

ವಿಶ್ವದಲ್ಲೇ ಭಾರತ ದೇಶವನ್ನು ಅಗ್ರಮಟ್ಟಕ್ಕೆ ತಲುಪಿಸುವಲಿ ದೇಶವನ್ನು ಅಭಿವೃದ್ಧಿಯೆಡೆಗೆ ದಿಟ್ಟ ಹೆಜ್ಜೆ ಇರಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು , ದೇಶದ ಸೈನ್ಯಕ್ಕೆ ಹೊಸ ಸ್ಪರ್ಶನೀಡಿ ವಿಶ್ವದ ಮಟ್ಟದಲ್ಲಿ ಗೌರವ ತಂದುಕೊಟ್ಟು ಬಲಿಷ್ಠವನ್ನಾಗಿ ಮಾಡಿದ ಏಕೈಕ ನಾಯಕರಾಗಿದ್ದಾರೆ ಎಂದು ಹೇಳಿದರು.

ಶ್ರೀರಾಮನ ಕಾಣುವ ಹಿಂಗಿತ ,ಆತ್ಮನಿರ್ಭರ ಭಾರತ,ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ಡಿಜಿಟಲ್ ಇಂಡಿಯಾ ಮುಖಾಂತರ ವಿಶ್ವದಲ್ಲಿ ಕ್ರಾಂತಿ ವಿಶ್ವಮಟ್ಟದಲ್ಲಿ ಸಾಮರಸ್ಯ ನಾಯಕತ್ವ ಹೊಂದಿದ ವಿಶ್ವಗುರು , ನರೇಂದ್ರ ದಾಮೋದರ ದಾಸ್ ಮೋದಿ ಎಂದು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ,ಎಂಎಲ್ ಡಿಸಿ ಮುನಿರಾಜು, ವಾರ್ಡ್ ನ ಅಧ್ಯಕ್ಷ ರಮೇಶ್ ಗೌಡ,ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಜಿಮ್ ರಮೇಶ್ ಗೌಡ,ಮುಖಂಡರಾದ ಬಾಕ್ಸರ್ ನಾಗರಾಜ್, ನಾಗೇನಹಳ್ಳಿ ಲೋಕೆಶ್,ಸುಗುಮಾರ್,ಶ್ರೀರಾಮ್, ರಾಮು ಮತ್ತಿತರರು ಇದ್ದರು.

You may also like

Leave a Comment