Saturday, July 11, 2026
Home ಆರೋಗ್ಯಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

by Dharmaraju
0 comments

ಕೆ.ಆರ್.ಪುರ-ಕ್ಷೇತ್ರದ ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮಾಡುವುದರಿಂದ ಬಡ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ
ಕ್ಯಾಲಸನಹಳ್ಳಿಯ ಸರ್ಕಾರಿ ಶಾಲೆಗೆ ಕಾಂಗ್ರೆಸ್ ಹಿರಿಯ ಮುಖಂಡ ಅಗರ ಆರ್.ಪ್ರಕಾಶ್ ಅವರು ಶುದ್ಧ ನೀರಿನ ಘಟಕವನ್ನು ಕೋಡುಗೆ ನೀಡಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಗ್ರೀನ್ ಹೊರಮಾವು ಅಭಿಯಾನದ ಹಿನ್ನಲೆಯಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯ ಮಾಡಲಾಗಿದ್ದು,ಹಸಿರು ಹೊರಮಾವು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ಹಿರಿಯ ಮುಖಂಡ ಅಗರ ಆರ್.ಪ್ರಕಾಶ್,ಹೇಮಾವತಿ ಸುರೇಶ್,ವಾರ್ಡನ ಅಧ್ಯಕ್ಷ ಪ್ರಸನ್ನ,ಗೆದ್ದಲಹಳ್ಳಿ ಮುನಿರಾಜು,ಸುಧನ್ವ ಮುಖಂಡರಾದ ಸುನೀಲ್,ರವಿ ಲಕ್ಷ್ಮಣರೆಡ್ಡಿ ಇದ್ದರು.


You may also like

Leave a Comment