ಕೆ.ಆರ್ ಪುರ, ಜೂ.28 – ಜಿಬಿಎ ಚುನಾವಣೆಗೆ ಸಂಘಟನೆ ಮಾಡುವ ಉದ್ದೇಶದಿಂದ ಕಚೇರಿಗಳನ್ನು ತೆರೆಯಲಾಗಿದೆ ಎಂದು ಜಿಬಿಎ ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ತಿಳಿಸಿದರು.

ಕೆ.ಚನ್ನಸಂದ್ರದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಚೇರಿಗಳನ್ನ ತೆರೆಯುವುದರಿಂದ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನ ಕುಂದು ಕೊರತೆಗಳನ್ನ ನಮ್ಮ ಮುಖಂಡರ ಬಳಿ ಹೇಳಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಕಚೇರಿಗೆ ಬಂದು ಅಹವಾಲು ಹೇಳಬಹುದು, ಗ್ಯಾರೆಂಟಿ ಯೋಜನೆಗಳ ಬಗ್ಗೆ, ಎಸ್‌ಐಆರ್ ಬಗ್ಗೆ ಜನರಿಗೆ ತಿಳುವಳಿಕೆ ತಿಳಿಸಲು ಸಹ ಇದು ಉಪಯೋಗವಾಗಲಿದೆ. ಜಿಬಿಎ ಚುನಾವಣೆಯಲ್ಲಿ ಪ್ರತಿಯೊಂದು ವಾರ್ಡ್ ಸಹ ಗೆಲ್ಲಬೇಕು. ಇದಕ್ಕೆ ಕಾರ್ಯಕರ್ತರೆಲ್ಲಾ ಸಜ್ಜಾಗಬೇಕು ಕೆರೆ ನೀಡಿದರು.
ವಾರ್ಡ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಕಳೆದ 13 ವರ್ಷಗಳಿಂದ ರಸ್ತೆ ಸಮಸ್ಯೆಯನ್ನು ಈ ಭಾಗದಲ್ಲಿ ಎದುರಿಸುತ್ತಿದ್ದೇವೆ. ಧೂಳು ಹಿಡಿದ ದೀಪಗಳು ಇಲ್ಲಿ ಕಾಣಿಸುತ್ತದೆ. ಇನ್ನು ಹಲವು ಸಮಸ್ಯೆಗಳಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಜಿಬಿಎ ಪ್ರಬಲ ಆಕಾಂಕ್ಷಿ ರವಿಯವರು ತಮ್ಮ ಸ್ವಂತ ಇಚ್ಛೆಯಿಂದ
ಆಟೋ ಗ್ಯಾಸ್ ಸಮಸ್ಯೆ ಎದುರಿಸುತ್ತಿರುವ ಆಟೋ ಚಾಲಕರಿಗೆ
ಸಮವಸ್ತ್ರ ಮತ್ತು ಸಹಾಯ ಧನ ನೀಡಿ ಗೌರವಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಭೂ ನ್ಯಾಯ ಮಂಡಳಿ ಸದಸ್ಯ ಸುನೀಲ್, ಕೆ.ಚನ್ನಸಂದ್ರ ವಾರ್ಡ್ ಆಕಾಂಕ್ಷಿ ರವಿ, ವಾರ್ಡ್ ಅಧ್ಯಕ್ಷರಾದ ಗಂಗಾಧರ್ ಸುಧನ್ವ, ಪ್ರಸನ್ನ, ಮುಖಂಡರಾದ ಅಗರ ಪ್ರಕಾಶ್, ಕೌದೇನಹಳ್ಳಿಬೀರಪ್ಪ, ಮುನಿರಾಜು, ಪವನ್ ಮತ್ತಿತರರಿದ್ದರು.