ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-03/07/2026 ರಂದು 66/11ಕೆವಿ ತೂಬಗೆರೆ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F01-Pragathi, F02-Tapasipura, ಫೀಡರ್‌ಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 03:00 ಗಂಟೆವರೆಗೆ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್‌ನ ಮಾರ್ಗಗಳಲ್ಲಿ ಮೇಲ್ಕಂಡ ಸಮಯದಲ್ಲಿ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಗಂಟಗಾನಹಳ್ಳಿ, ಕಾವಲಹಳ್ಳಿ, ಮಾರಹಳ್ಳಿ, ಭೂಮೇನಹಳ್ಳಿ, ಮೆಳೇಕೋಟೆ, ಚಿಕ್ಕರಾಯಪ್ಪನಹಳ್ಳಿ, ದೊಡ್ಡರಾಂಯಪ್ಪನಹಳ್ಳಿ, ಸಾಧುಮಠ, ಸೊಣ್ಣಾಪುರ, ಚೌಗೊಂಡನಹಳ್ಳಿ, ಮುಕ್ಕೇನಹಳ್ಳಿ, ಮೆಳೇಕೋಟೆ ಕ್ರಾಸ್, ಊದನಹಳ್ಳಿ, ಹೆಗ್ಗಡಿಹಳ್ಳಿ, ಕಣಿವೇಪುರ, ಸೊಣ್ಣಮಾರನಹಳ್ಳಿ, ಮಾಚಗೊಂಡನಹಳ್ಳಿ, ಗೂಳ್ಯ, ನಂದಿಗುಂದ, ದಂಡುದಾಸ ಕೊಡಿಗೇಹಳ್ಳಿ, ವಾಸುದೇವನಹಳ್ಳಿ, ಕುರುಬರಹಳ್ಳಿ, ಸೀಗೇಹಳ್ಳಿ, ಚನ್ನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.