ಕೆ.ಆರ್.ಪುರ: ಚಿತ್ರದುರ್ಗದ ಭೋವಿ ಗುರು ಪೀಠದ ಆವರಣದಲ್ಲಿ ಜುಲೈ 25 ರಂದು ರಾಷ್ಟ್ರೀಯ ಮಟ್ಟದ ಭೋವಿ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಓಡ್ ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ ಇಂಟರ್‌ನ್ಯಾಷನಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಿಟಾಚಿ ಮಂಜುನಾಥ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ 17ನೇ ಪಟ್ಟಾಭಿಷೇಕದ ಮಹೋತ್ಸವ, ದೀಕ್ಷೆಯ 28ನೇ ಮಹೋತ್ಸವ, 40 ಜನ್ಮ ವರ್ಧಂತ್ಯುತ್ಸವ, ಪಿಯುಸಿಯಲ್ಲಿ ಶೇಕಡಾ 90 ಕ್ಕೂ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ವಿತರಣೆ, ಉಚಿತ ಸಾಮೂಹಿಕ ವಿವಾಹ, ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜಿ.ಪರಮೇಶ್ವರ್ ಮುಖ್ಯ ಅತಿಥಿ ಗಳಾಗಿ ಆಗಮಿಸಲಿದ್ದಾರೆ ಎಂದರು. ಎಚ್.ವಿ.ವೆಂಕಟೇಶ್, ಶಿವರಾಜ ತಂಗಡಗಿ, ಮಾನಪ್ಪ ವಜ್ಜಲ್, ಎಂ. ಚಂದ್ರಪ್ಪ, ಎಸ್.ರಘು, ಮಂಜುಳಾ ಅರವಿಂದ ಲಿಂಬಾವಳಿ, ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು, ರವಿಕುಮಾರ್ ಉಪಸ್ಥಿತರಿರುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸುವರು.
40ಕ್ಕೂ ಹೆಚ್ಚು ವಿವಿಧ ಮಠಗಳ ಪೀಠಾಧ್ಯಕ್ಷರು, ರಾಷ್ಟ್ರೀಯ ಮಟ್ಟದ ಭೋವಿ ಜನಾಂಗದ ನಾಯಕರು, ಮಾಜಿ ಶಾಸಕರು ಭಾಗವಹಿಸುವರು ಇದೇ ವೇಳೆ ಸಮುದಾಯ ಅಭಿವೃದ್ಧಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು. ಓಡ್ ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ ಇಂಟನ್ಯಾಷನಲ್ ರಾಷ್ಟ್ರೀಯ ಕಾರ್ಯದರ್ಶಿ ಮಾಕಳಿ ಎಚ್.ಪಿಯ
ಸಮಾವೇಶ ದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, ಎಲ್ಲರಿಗೂ ತಿಂಡಿ. ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಮಾವೇಶದ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಸಚಿವ ಸಂಪುಟದಲ್ಲಿ ಭೋವಿ ಜನಾಂಗದ ಇಬ್ಬರಿಗೆ ಸ್ನಾನ, ವಿಧಾನ ಪರಿಷತ್, ನಿಗಮ ಮಂಡಳಿಗಳಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜನಾರ್ಧನಸ್ವಾಮಿ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಮುನಿಮಾರಪ್ಪ, ಜಯ ರಾಮು, ಕನಕರಾಜು, ಹೇಮಂತ್, ಸೌಭಾಗ್ಯ, ರುಕ್ಕಿಣಿ, ಮೈಸೂರು ನಾರಾಯಣಸ್ವಾಮಿ, ಎಸ್‌ಡಿಡಿಪಿ ಚಂದ್ರಪ್ಪ ಮುಂತಾದವರು ಹಾಜರಿದ್ದರು.