ಕೆ.ಆರ್.ಪುರ:ಕೆ ಆರ್ ಪುರ ಸಂತೆ ಮಾರುಕಟ್ಟೆ ಹಾಗೂ ಮಾರುಕಟ್ಟೆಯಿಂದ ಎರಡು ಕಿಲೋಮೀಟರ್ ವರೆಗೆ ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನಿಂದ ಗುತ್ತಿಗೆದಾರ ವ್ಯಾಪಾರಸ್ಥರಿಂದ ಹಪ್ತ ವಸೂಲತಿ ಮಾಡುತ್ತಿದ್ದು,ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕೆ.ಆರ್.ಪುರದ ಸಂತೆ ಬಳಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಸಂತೆ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಅಕ್ರಮ ವಸೂಲಿಗೆ ಕಡಿವಾಣ ಹಾಕಬೇಕು, ಜಿಬಿಎ ಷರತ್ತುಗಳನ್ನು ಉಲ್ಲಂಘಿಸಿದ್ದು ಕೂಡಲೆ ಗುತ್ತಿಗೆಯನ್ನು ರದ್ದು ಗೊಳಿಸಿ ಅವರ ಮುಂಗಡ ಹಣವನ್ನು ಮುಟ್ಟು ಗೋಲು ಹಾಕಿಕೊಂಡು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಬಿಎ ಮಹದೇವಪುರ ವಲಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್.ಹಾಗು ಕೆ.ಆರ್.ಪುರ ವಲಯ ಜಂಟಿ ಆಯಕ್ತರಾದ ಡಾ.ಸುಧಾ ಸ್ವಪ್ನ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎಲೆ.ಶ್ರೀನಿವಾಸ್ ಮಾತನಾಡಿ ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನ ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡಿತ್ತಿದ್ದಾರೆ,ಸಂತೆ ಜಾಗವನ್ನು ಹೊರತುಪಡಿಸಿ ಸಿಕ್ಕ ಸಿಕ್ಕ ಕಡೆ ಅಕ್ರಮ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಕೆ.ಆರ್ ಪುರ ಸಂತೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿರುವ ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿ ಅಂಗಡಿ ಮಳಗೆಗಳನ್ನು ಅಕ್ರಮವಾಗಿ ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ
ಕೆ.ಆರ್ ಪುರ ಸಂತೆಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಹಾಗೂ ಅಂಗಡಿ ತೆರವು ಮಾಡದಂತೆ ಈಗಿನ ಗುತ್ತಿಗೆದಾರ ಅಂಜನಮೂರ್ತಿ ಸ್ವತಃ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯ ಯಥಸ್ಥಿತಿ ಕಾಪಾಡಲು ಆದೇಶಿಸಿದೆ, ಆದರೆ ದಾವೆ ಹೂಡಿರುವ ವ್ಯಕ್ತಿ ನ್ಯಾಯಾಲಯ ಅದೇಶವನ್ನು ಉಲ್ಲಂಘಿಸಿ ಅಂಗಡಿಗಳನ್ನು ದ್ವಂಸಗೊಳಿಸಿರುತ್ತಾನೆ ಎಂದು ಆರೋಪಿಸಿದರು.
ನಗರದಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆದಿದೆ, ಇದರ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ ಆದರೆ ಕೆ.ಆರ್ ಪುರ ಭಾಗದಲ್ಲಿ ಸಂತೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಾರೆ ಈ ಬಗ್ಗೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಮಾತ್ರ ಯಾಕೆ ಮೌನವಾಗಿದ್ದಾರೆ
ಎಂದು ಪ್ರಶ್ನೆಮಾಡಿದರು.
ರಸ್ತೆ ಸಂಚಾರದ ಜವಾಬ್ದಾರಿ ಟ್ರಾಫಿಕ್ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಗುತ್ತಿಗೆದಾರನ ಜೊತೆ ಜಿಬಿಎ ಅಧಿಕಾರಿಗಳು, ಸಂಚಾರಿ ಪೊಲೀಸರು ಶಾಮೀಲಾಗಿ ಪ್ರತಿ ತಿಂಗಳು ಅವರಿಂದ ಲಂಚದ ರೂಪದಲ್ಲಿ ಮಮೂಲಿ ಪಡೆದು ಇಲ್ಲಿ ನಡೆಯುವ ಎಲ್ಲಾ ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಸಂತೆ ಜಾಗದಲ್ಲಿ ಸುಂಕ ವಸೂಲಿ ಸಂಬಂಧ ಜಂಟಿ ಆಯುಕ್ತರ ಸಮ್ಮುಖದಲ್ಲಿ ಅಳತೆ ಮಾಡಲಾಗಿದೆ, ಅದರಲ್ಲಿ 1.20 ಕಿಲೋ ಮೀಟರ್ ಬದಲು 3 ಕಿಲೋ ಮೀಟರ್ ನಷ್ಟು ವ್ಯಾಪ್ತಿ ಮೀರಿ ಪುಂಡ ಪೊಕರಿಗಳಿಂದ ಆಗುತ್ತಿರುವ ಅಕ್ರಮ ವಸೂಲಿ ಕಾರ್ಯವನ್ನು ತಪ್ಪಿಸಬೇಕು ಎಂದು ಹೇಳಿದರು.
ತೆರವು ಮಾಡಿದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ
ಅವರನ್ನ ಬೀದಿಗೆ ತಲ್ಲಿದ್ದಾರೆ ಎಂದು ಆರೋಪಿಸಿದರು.