ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಸೆ.27ರ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪೆರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರದ ಫೀಡರ್‌ನ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ರೈಲ್ವೆ ಸ್ಟೇಷನ್, ಮುತ್ತೂರು, ಸಿದ್ದೇನಾಯಕನಹಳ್ಳಿ, ಎಂ.ಎ.ಪ್ರಕಾಶ್ ಲೇಔಟ್, ಎಂ.ಜಿ.ಗಾರ್ಡನ್ ಲೇಔಟ್, ಸದಾಶಿವನಗರ ಲೇಔಟ್, ಸರ್ವಜ್ಞನಗರ, ಖಾಸ್‌ಬಾಗ್, ಚಂದ್ರಶೇಖರಪುರ, ಶ್ರೀನಗರ, ಸೌಂಟ್ ಕ್ಯಾಂಪ್ ರಸ್ತೆ, ರಘುನಾಥಪುರ, ಬಾಶೆಟ್ಟಿಹಳ್ಳಿ, ತಮ್ಮಶೆಟ್ಟಿಹಳ್ಳಿ, ಎಲ್&ಟಿ ಕಾರ್ಖಾನೆ, ಇಂಡೇನ ಇಂಡಿಯಾ, ಇಟಾಚಿ ಕಾರ್ಖಾನೆ, ಸಂಧ್ಯಾ ಫಾರಂ, ಐಸಿ ಫ್ರೆಷ್, ರಾಜಶ್ರೀ ಕಂಫರ್ಟ್, ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
