Sunday, 15 November 2026 — Prajabharat
BREAKING NEWS
ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ ದೊಡ್ಡಬಳ್ಳಾಪುರ ದುಡ್ಡಿನ ಆಡಂಬರ, ಸುಳ್ಳು ಭಾಷಣಗಳ ಸರದಾರ ಶಾಸಕ ಧೀರಜ್: ಮಾಜಿ ಶಾಸಕ ವೆಂಕಟರಮಣಯ್ಯ ಟೀಕೆ ಬೆಂಗಳೂರು ನಗರ ಕಾಂಗ್ರೆಸ್ ಬಲವರ್ಧನೆಗೆ ಸಂಘಟನ್ ಸೃಜನ್ ಅಭಿಯಾನ.. ಜಿಲ್ಲಾ‌ಸುದ್ದಿ ಕೋವಿಡ್‌ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಂಸದ ಡಾ.ಕೆ.ಸುಧಾಕರ್‌ ಬೆಂಗಳೂರು ನಗರ ದೀಪಾವಳಿ ವಿಶೇಷ: ಪರಮ್ ಫೌಂಡೇಶನ್‌ನಿಂದ ಲೇಸರ್ ಪ್ರೊಜೆಕ್ಷನ್ ಅನುಭವ. ಬೆಂಗಳೂರು ನಗರ ಶಾಸಕ‌ ಬೈರತಿ ಬಸವರಾಜ ವಿರುದ್ದ ಕೈ ಕಾರ್ಯಕರ್ತರ ಪ್ರತಿಭಟನೆ. ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ ದೊಡ್ಡಬಳ್ಳಾಪುರ ದುಡ್ಡಿನ ಆಡಂಬರ, ಸುಳ್ಳು ಭಾಷಣಗಳ ಸರದಾರ ಶಾಸಕ ಧೀರಜ್: ಮಾಜಿ ಶಾಸಕ ವೆಂಕಟರಮಣಯ್ಯ ಟೀಕೆ ಬೆಂಗಳೂರು ನಗರ ಕಾಂಗ್ರೆಸ್ ಬಲವರ್ಧನೆಗೆ ಸಂಘಟನ್ ಸೃಜನ್ ಅಭಿಯಾನ.. ಜಿಲ್ಲಾ‌ಸುದ್ದಿ ಕೋವಿಡ್‌ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಂಸದ ಡಾ.ಕೆ.ಸುಧಾಕರ್‌ ಬೆಂಗಳೂರು ನಗರ ದೀಪಾವಳಿ ವಿಶೇಷ: ಪರಮ್ ಫೌಂಡೇಶನ್‌ನಿಂದ ಲೇಸರ್ ಪ್ರೊಜೆಕ್ಷನ್ ಅನುಭವ. ಬೆಂಗಳೂರು ನಗರ ಶಾಸಕ‌ ಬೈರತಿ ಬಸವರಾಜ ವಿರುದ್ದ ಕೈ ಕಾರ್ಯಕರ್ತರ ಪ್ರತಿಭಟನೆ. ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ.
ಬೆಂಗಳೂರು ಗ್ರಾಮಾಂತರ

ಏ.06 ರಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ:ಡಿಸಿ

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು

ಬೆಂ.ಗ್ರಾ.ಜಿಲ್ಲೆ: ದೇವನಹಳ್ಳಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಏಪ್ರಿಲ್ 06 ರಂದು ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.

ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು ಬಸವೇಶ್ವರ ಪುತ್ಥಳಿ ಕಾಮಗಾರಿ ಮುಗಿದಿದ್ದು ಏಪ್ರಿಲ್ 06 ರಂದು ಉದ್ಘಾಟನೆಗೆ ಸಿದ್ಧವಾಗಿದೆ, ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ. ನಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಗಣ್ಯರು, ಮಠಾಧೀಶರು ಆಗಮಿಸಲಿದ್ದು ಕಾರ್ಯಕ್ರಮ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು ಎಂದರು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ತಲುಪಿಸಬೇಕು. ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಲಾತಂಡಗಳ ಮೆರುಗು, ಸಂಗೀತ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದರು. ವೇದಿಕೆ ಅಲಂಕಾರಕ್ಕೆ ತೋಟಗಾರಿಕೆ ಇಲಾಖೆ, ಉಪಹಾರ ವ್ಯವಸ್ಥೆಗೆ ಘಾಟಿಗೆ ಸೂಚಿಸಲಾಯಿತು. ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಬಸವಣ್ಣ ಅವರ ಮಂಟಪ 28 ಅಡಿ. ಕಂಚಿನ ಪ್ರತಿಮೆ 5 ಅಡಿ ಉದ್ದವಾಗಿದ್ದು 450 ಕೆಜಿ ಕಂಚು ಬಳಕೆ ಮಾಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಜೀವ್ ಸುಲೋಚನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್ ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್, ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ವಿ.ಮಂಜುನಾಥ್, ಅಧ್ಯಕ್ಷರಾದ ಎಸ್ ರಮೇಶ್ ಸೇರಿದಂತೆ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯ ಸಂಪಾದಕರು (Chief Editor) ✍️ 316 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment