ಮಹದೇವಪುರ: ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಹಾಗೂ ಮಹದೇವಪುರ ಕ್ಷೇತ್ರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಲ್.ರಾಜೇಶ್ ಅವರು ತಮ್ಮ ಹುಟ್ಟು ಹಬ್ಬವನ್ನು ವೈಟ್ ಫೀಲ್ಡ್ ನ ಇನ್ನರ್ ಸರ್ಕಲ್ ಮೈದಾನದಲ್ಲಿ ಕ್ಷೇತ್ರದ ಶಾಸಕಿ ಮಂಜುಳ ಲಿಂಬಾವಳಿಯವರ ಕ್ಷೇತ್ರದ ಮುಖಂಡರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು.
ನೂರಾರು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ, ಸನ್ಮಾನಿಸುವ ಮೂಲಕ ಶುಭಾಶಯ ಕೋರಿದರು. ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ, ಬಡವರಿಗೆ ದಿನಸಿ ಕಿಟ್, ಸೀರೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ,ಅಂಗವಿಕಲರಿಗೆ ವೀಲ್ ಚೇರ್, ಬೀದಿ ವ್ಯಾಪಾರಿಗಳಿಗೆ ತಲ್ಲು ಗಾಡಿ, ಅನಾಥ ಆಶ್ರಮಗಳಿಗೆ ಸಹಾಯ ಊಟದ ವ್ಯವಸ್ಥೆ ಹೀಗೆ ಹಲವಾರು ಸೇವಾಕಾರ್ಯಗಳನ್ನು ಆಯೋಜಿಸಿದ್ದು, ಕ್ಷೇತ್ರದ ಜನತೆ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮ ಕುರಿತು ಮತನಾಡಿ ಎಲ್.ರಾಜೇಶ್ ಅವರು. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರ ಆದರ್ಶ, ಮಾರ್ಗದರ್ಶನದಂತೆ ಅವರ ಹಾದಿಯಲ್ಲಿ ಸಾಗುತ್ತಿದ್ದೇನೆ. ನನ್ನ ಜನ್ಮದಿನದಂದು ಅನಗತ್ಯವಾಗಿ ದುಂದು ವೆಚ್ಚ ಮಾಡದೆ, ಬಡವರಿಗೆ ಅನುಕೂಲವಾಗುವಂತೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಅನಾಥಾಶ್ರಮಗಳಲ್ಲಿ ಮಕ್ಕಳು, ವೃದ್ಧರಿಗೆ ಹಣ್ಣು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾ ಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸರಳತೆ, ಜನಸ್ನೇಹಿ ಆಡಳಿತ ನಡೆಸುತ್ತಿರುವ ಅರವಿಂದ ಲಿಂಬಾವಳಿ ಅವರ ಆದರ್ಶಗಳನ್ನು ಪಾಲಿಸಬೇಕಾದುದು ಅವರ ಅಭಿಮಾನಿಯಾದ ನಮ್ಮ ಕರ್ತವ್ಯವಾಗಿದ್ದು, ಅವರ ಪಾಲನೆಯಂತೆ ಇಂದು ನಮ್ಮ ಶಾಸಕರ ಸಮ್ಮುಖದಲ್ಲಿ ಬಡವರಿಗೆ ದಿನಸಿ ಕಿಟ್. ಅಂಗವಿಕಲರಿಗೆ ವೀಲ್ ಚೇರ್. ಹೂರುಗೋಲು ಆರೋಗ್ಯ ಶಿಬಿರ, ಸೀರೆ ವಿತರಣೆ, ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ.ಬಿಬಿಎಂಪಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ಟು ಬಟ್ಟೆ, ಆಟೋ ಚಾಲಕರಿಗೆ ಬಟ್ಟೆ,ಬುದ್ದಿ ಮಾಂದ್ಯ ಮಕ್ಕಳಿಗೆ ಊಟ ಹಣ್ಣು ವಿತರಣೆ ಹೀಗೆ ಹಲವಾರು ಸೇವ ಕಾರ್ಯಕ್ರಮ ನೀಡುತ್ತಿದೇನೆ. ಇದರಿಂದ ನನ್ನ ಮನಸ್ಸಿಗೂ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮಾಜಿ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ಮಾರಪ್ಪ, ಹೂಡಿ ಮಂಜುನಾಥ್ ವರ್ತೂರು ಶ್ರೀಧರ್,ವಿಪಿ ರಕ್ಷಿತ್, ಮಧುಗೌಡ, ರವಿ ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಡವರಿಗೆ ಸಹಾಯಹಸ್ತ ನೀಡಿದ ಬಿಜೆಪಿ ಯುವ ಮುಖಂಡ ಎಲ್ ರಾಜೇಶ್.