ವೈಟ್ ಫೀಲ್ದ್: ಮೆಡಿಕವರ್ ಆಸ್ಪತ್ರೆಯಲ್ಲಿ ನಲ್ಲಿ 67 ವರ್ಷದ ಮಹಿಳೆಗೆ ಸಂಭವಿಸಬಹುದಾದ ಗಂಭೀರ ಸ್ಟ್ರೋಕ್ ಅಪಾಯವನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ.
ರೋಗಿಗೆ ಒಂದು ವಾರದಿಂದ ತಲೆಸುತ್ತು , ಬಲಭಾಗದಲ್ಲಿ ದುರ್ಬಲತೆ ಮತ್ತು ಮಾತು ತಡಕಾಡುವ ಲಕ್ಷಣಗಳು ಮರುಕಳಿಸುತ್ತಿದ್ದವು. ಈ ಲಕ್ಷಣಗಳು ಕೆಲವೇ ನಿಮಿಷಗಳವರೆಗೆ ಮುಂದುವರಿದರೂ, ಅವು ಪದೇ ಪದೇ ಕಾಣಿಸಿಕೊಳ್ಳುತ್ತಾ ಇದ್ದದ್ದು ಮುಂದೆ ಗಂಭೀರ ಸಮಸ್ಯೆಯಾಗುವ ಸೂಚನೆ ಕಾಣಿಸ್ತಾ ಇತ್ತು..
ರೋಗಿ ಈಗಾಗಲೇ ಡ್ಯುಯಲ್ ಆಂಟಿಪ್ಲೇಟ್ಲೆಟ್ ಥೆರಪಿಯಲ್ಲಿ ಇದ್ದರೂ ಸಮಸ್ಯೆಗಳು ಮುಂದುವರಿಯುತ್ತಾ ಇತ್ತು . MRI ಪರೀಕ್ಷೆಯಲ್ಲಿ ತಕ್ಷಣದ ಸ್ಟ್ರೋಕ್ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೂ, CT ಅಂಗಿಯೋಗ್ರಫಿ ಪರೀಕ್ಷೆಯಲ್ಲಿ ಬ್ಯಾಸಿಲರ್ ಆರ್ಟರಿಯಲ್ಲಿ ಸುಮಾರು 95% ಮತ್ತು ಎಡ ಸಬ್‌ಕ್ಲೇವಿಯನ್ ಆರ್ಟರಿಯಲ್ಲಿ ಸುಮಾರು 90% ಗಂಭೀರ ಸಮಸ್ಯೆಕಂಡುಬಂದಿತ್ತು.
ಈ ಸ್ಥಿತಿಯ ಗಂಭೀರತೆಯನ್ನು ಗಮನಿಸಿ, ತಕ್ಷಣವೇ ಇಂಟರ್ವೆನ್ಶನಲ್ ರೇಡಿಯಾಲಜಿ ತಂಡದ ಸಹಯೋಗದಲ್ಲಿ ರೋಗಿಗೆ ಜನರಲ್ ಅನಸ್ತೇಶಿಯಾದಲ್ಲಿ ಎಂಡೋವಾಸ್ಕ್ಯುಲರ್ ಸ್ಟೆಂಟಿಂಗ್ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.
ಚಿಕಿತ್ಸೆಯ ನಂತರ ಮೆದುಳಿಗೆ ರಕ್ತಪ್ರವಾಹ ಸರಿಯಾಗಿದ್ದು, TIA ಲಕ್ಷಣಗಳು ಮರುಕಳಿಸಲಿಲ್ಲ.
ಚಿಕಿತ್ಸೆಯ ನಂತರ ರಕ್ತದ ಒತ್ತಡದಲ್ಲಿ ಏರುಪೇರು ಕಂಡುಬಂದಿದ್ದು, ಐವಿ ಮತ್ತು ಮೌಖಿಕ ಔಷಧಿಗಳ ಮೂಲಕ ನಿಯಂತ್ರಿಸಲಾಯಿತು. ಇದೀಗ ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಮುಂದಿನ ಚಿಕಿತ್ಸೆ ಸಲಹೆಗಳೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.
ಡಾ. ಸುರಭಿ ಚತುರ್ವೇದಿ ಹೇಳಿದರು:
“TIA ಅನ್ನು ತುರ್ತು ಪರಿಸ್ಥಿತಿಯಾಗಿ ಪರಿಗಣಿಸಬೇಕು. ಮೊದಲ 24–48 ಗಂಟೆಗಳು ಅತ್ಯಂತ ಅಪಾಯಕಾರಿ. ಸರಿಯಾದ ಕಾರಣವನ್ನು ಗುರುತಿಸಿ ಸಮಯಕ್ಕೆ ಚಿಕಿತ್ಸೆ ನೀಡಿದರೆ ಭಾರಿ ಸ್ಟ್ರೋಕ್ ತಪ್ಪಿಸಬಹುದು.”
ಪ್ರೆಸ್ ಮೀಟ್‌ನಲ್ಲಿ ಕರ್ನಾಟಕ ರೀಜನಲ್ ಡೈರೆಕ್ಟರ್ ಸಿದ್ಧ ರೆಡ್ಡಿ, ಆಸ್ಪತ್ರೆ ಮುಖ್ಯಸ್ಥ ಕೃಷ್ಣಮೂರ್ತಿ, ನ್ಯೂರಾಲಜಿಸ್ಟ್ ಡಾ. ಸುರಭಿ ಚತುರ್ವೇದಿ, ಜನರಲ್ ಫಿಸಿಯನ್ ಡಾ .ರಾಜ ಸೆಲ್ವರಾಜನ್ ಇಆರ್ ಮುಖ್ಯಸ್ಥ ಡಾ. ಕುಶಾಲ್, ಐಸಿಯು ಮುಖ್ಯಸ್ಥೆ ಡಾ. ನಿತ್ಯ ಅಚ್ಚಯ್ಯ, ಅನಸ್ಥೆಟಿಸ್ಟ್ ಡಾ. ಮೋನಿಕಾ ಗುಪ್ತಾ ಹಾಗೂ ರೋಗಿ ಭಾಗವಹಿಸಿದ್ದರು.
