Wednesday, April 15, 2026
Home ತಾಜಾ ಸುದ್ದಿಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ

ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ

by Dharmaraju
0 comments

ಹಾನಗಲ್ : ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ ರೋಗ ಮುಕ್ತ ಜೀವನಶೈಲಿ ನಮ್ಮ ಸಂತೋಷದ ಬದುಕಿಗೆ ದಾರಿದೀಪವಾಗಬಲ್ಲದು ಆರೋಗ್ಯ ಮತ್ತು ಸಂತೋಷ ಸಾಧಿಸುವುದು ಮಾತ್ರ ಸಾಧ್ಯ ಎಂದು ಹೋತನಹಳ್ಳಿ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಅರಳೇಶ್ವರ ಗ್ರಾಮದ ದೇವಸ್ಥಾನದ ಕಲಾ ಭವನದ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಒಂಭತ್ತು ದಿನಗಳ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗುರುವಾರ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನಸ್ಸು ಅತ್ಯಂತ ಮಹತ್ವವಾದ ಸಾಧನ. ನಮ್ಮ ಬದುಕು ಬದುಕಿನ ಕಲೆ ಎಲ್ಲವೂ ಮನಸ್ಸಿನ ಮೇಲೆ ಅವಲಂಬಿತ. ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಿಸುವ ಕೆಲಸ ಮಾಡಬೇಕು. ಜಗತ್ತಿನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ವಚನ ಸಾಹಿತ್ಯವು ಕೇವಲ ಒಂದು ಧರ್ಮಕ್ಕೆ ಸೀಮತವಾಗಿರದೆ. ಅವುಗಳ ಮಾನವ ಬದುಕಿಗೆ ದಿಕ್ಸೂಚಿಯಾಗಿವೆ ಎಂದರು.

ಈ ವೇಳೆಯಲ್ಲಿ ಪೂಜ್ಯ ಶ್ರೀ ವೀರಬಸವ ಅಸಂಗಿ, ಸಂಗೀತ ಸೇವೆ ಮಂಜುನಾಥ ಗದಗ ಗವಾಯಿ, ತಬಲಾ ಸೇವೆ ಪ್ರಶಾಂತಕುಮಾರ ಕೋಗಳಿ, ಹಾಗೂ ಗ್ರಾಮದ ದೇವಸ್ಥಾನದ ಕಮೀಟಿಯವರು ಮತ್ತು ಊರಿನ ಗ್ರಾಮಸ್ಥರು ಇದ್ದರು.

You may also like

Leave a Comment