Wednesday, April 15, 2026
Home ಬೆಂಗಳೂರು ನಗರಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

by Dharmaraju
0 comments

ಕೆ.ಆರ್.ಪುರ:- ಬಡವರ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹೆಚ್ಚು ಸಹಕಾರಿಯಾಗಿದೆ ಎಂದು
ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ‌.ಮೋಹನ್ ಅವರು ತಿಳಿಸಿದರು.

ಕೆ.ಆರ್.ಪುರ ಕ್ಷೇತ್ರದ ಕೃಷ್ಣನಗರ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅವಕಾಶ ದೊರೆತಿದೆ ಅಲ್ಲದೆ,ಮೂಲಭೂತ ಸೌಕರ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ನುಡಿದರು.

ಯುವ ನಾಯಕರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ತನ್ನದೆ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಕೃಷ್ಣನಗರ ವಾರ್ಡನ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರು ಮಾತನಾಡಿ ಯುಗಾದಿ ಹಾಗೂ ರಂಜಾನ್ ಗಾಗಿ ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸೇವಾ ಕಾರ್ಯಗಳತ್ತ ಗಮನ ಹರಿಸಿದ್ದೆನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಯೋಜಕ ಡಿ.ಕೆ.ಹರೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಳಪ್ಪ, ಮುಖಂಡರಾದ ಚನ್ನಕೇಶವ, ಬಾಲಕೃಷ್ಣ, ಆಂಜಿನಪ್ಪ, ಎಸ್ ಎಲ್ .ವಿ.ವೆಂಕಟೇಶ್, ಭರತ್, ರಾಜಹಂಸ, ಪ್ರವೀಣ್,ಸಂತೋಷ್  ಮತ್ತಿತರರಿದ್ದರು.

You may also like

Leave a Comment