Wednesday, April 15, 2026
Home Uncategorizedಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

by Dharmaraju
0 comments

ಬೆಂಗಳೂರು: ದೊಡ್ಡ ಸಿನಿಮಾಗಳು ತೆರೆಗೆ ಬಂದಾಗ ಸಣ್ಣ ಸಿನಿಮಾಗಳು ರಿಲೀಸ್ ಮಾಡಲು ಹಿಂದೇಟು ಹಾಕಲಾಗುತ್ತೆ.. ಸ್ಕ್ರೀನ್ ಸಿಗೋದಿಲ್ಲ ಅನ್ನೋದು ಒಂದು ಕಾರಣವಾದ್ರೆ ನೋಡುಗರು ದೊಡ್ಡ ದೊಡ್ಡ ಸಿನಿಮಾಗಳ ಅಲೆಯಲ್ಲಿ ಸಣ್ಣ ಸಿನಿಮಾಗಳು ಕೊಚ್ಚಿ ಹೋಗಬಹುದು ಎಂಬುದು ಇನ್ನೊಂದು ಆತಂಕ.

ಅದ್ರೀಗ ಧುರಂಧರ್2 ಸುನಾಮಿಯ ಮುಂದೆಯೂ ಸೌತ್ ನ ಸಣ್ಣ ಸಿನಿಮಾಗಳು ಅಥವಾ ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದ ಸಿನಿಮಾಗಳು ಹೇಳಿಕೊಳ್ಳುವಂತಹ ಬಜೆಟ್ ಇಲ್ಲದ ಸಿನಿಮಾಗಳು ದೊಡ್ಡ ಸೌಂಡ್ ಮಾಡ್ತಿವೆ.

ಲವ್ ಮಾಕ್ಟೇಲ್ಗೆ ಗುಡ್ ರೆಸ್ಪಾನ್ಸ್

ಧುರಂಧರ್2 ಎದುರು ಬಂದ ನಮ್ಮ ಕನ್ನಡದ ಸಿನಿಮಾ ಲವ್ ಮಾಕ್ಟೇಲ್3 ಸಿನಿಮಾ ತನ್ನ ಎಮೋಷನಲ್ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯುತ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶನ ಮಾಡುವುದರ ಜೊತೆ ನಟನೆ ಮಾಡಿರೋ ಈ ಸಿನಿಮಾ ಯಾವುದೇ ಪ್ರಚಾರವಿಲ್ಲದೆ ತೆರೆಗೆ ಬಂತು.

ಸದ್ದು ಗದ್ದಲವಿಲ್ಲದೆ ಬಂದಿದ್ದು ನೋಡಿ ಯಾರಿಗೂ ಗೊತ್ತಾಗಲ್ಲ.. ಜನರನ್ನ ಸೆಳೆಯೋದಿಲ್ಲ ಅಂತ್ಲೇ ಎಲ್ಲರೂ ಭಾವಿಸಿದ್ರು.. ಆದ್ರೀಗ ಈ ಸಿನಿಮಾ ಸಕ್ಸಸ್ ನತ್ತ ಸಾಗಿದೆ. ಮೊದಲ ಮೂರು ದಿನಗಳಲ್ಲಿ 6 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿರೋ ಲವ್ ಮಾಕ್ಟೇಲ್3 ಸಿನಿಮಾ 2026ರಲ್ಲಿ ಇಲ್ಲಿಯವರೆಗೂ ಬಂದಿರೋ ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

ಮುಂದಿನ ದಿನಗಳಲ್ಲಿ ಈ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಒಳ್ಳೆಯ ಸಿನಿಮಾ ಮಾಡುದ್ರೆ ಜನ ಬರ್ತಾರೆ ಎಂಬ ಮಾತು ಮತ್ತೊಮ್ಮೆ ಲವ್ ಮಾಕ್ಟೇಲ್3 ಸಿನಿಮಾ ಮೂಲಕ ನಿರೂಪಿತವಾಗಿದೆ.

ತಮಿಳಿನ ಯೂಥ್ ಕೂಡಾ ಕ್ಲಿಕ್ ಆಯ್ತು

ಇನ್ನು ತಮಿಳಿನಲ್ಲಿ ಯೂಥ್ ಎಂಬ ಸಿನಿಮಾ ಬಂದಿದೆ.. ಕೆನ್ ಕರುಣಾಕರನ್ ನಿರ್ದೇಶನದ ಈ ಸಿನಿಮಾದ ಕಮಿಂಗ್ ಏಜ್ ರೊಮ್ಯಾಂಟಿಕ್ ಲವ್ ಸ್ಟೋರಿ ಅಂತ್ಲೇ ಕರೆಸಿಕೊಳ್ತಾ ಇದ್ದು, ಕಾಲಿವುಡ್ ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಇದೆ.

ಸಿಲಂಬರಸನ್ ಅಭಿಮಾನಿಯೊಬ್ಬನ ಸುತ್ತ ಸುತ್ತುವ ಕಥೆ ಸಖತ್ ಎಂಟರ್ ಟೈನಿಂಗ್ ಆಗಿದ್ದು, ಈ ಸಿನಿಮಾ ನೋಡಲು ಚಿತ್ರ ಪ್ರೇಮಿಗಳು ಮುಗಿ ಬೀಳ್ತಾ ಇದ್ದಾರೆ.. ಈ ಸಿನಿಮಾ ಮೊದಲ ಮೂರು ದಿನಗಳು 10 ಕೋಟಿಗೂ ಅಧಿಕ ಮೊತ್ತವನ್ನ ಗಳಿಸಿದೆ.. ಆ ಮೂಲಕ ಸೂಪರ್ ಹಿಟ್ ಎಂಬ ಟ್ಯಾಗ್ ಪಡ್ಕೊಂಡಿದೆ.

ಇದಿಷ್ಟೇ ಅಲ್ಲದೆ ಮಲಯಾಳಂನಲ್ಲಿ ಆಡು3 ಎಂಬ ಸಿನಿಮಾ ಸಹ ಉಗಾದಿ ಪ್ರಯುಕ್ತ ತೆರೆಗೆ ಬಂದಿದೆ. ಇದು ಆಡು2 ಸಿನಿಮಾದ ಪ್ರಾಂಚೈಸಿ ಆಗಿದ್ದು ಈ ಸಿನಿಮಾಗೂ ಸಹ ಅದ್ಭುತ ರೆಸ್ಪಾನ್ಸ್ ಸಿಕ್ತಾ ಇದೆ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರರಸಿಕರು ಹೊಟ್ಟೆ ಉಣ್ಣಾಗುವಷ್ಟು ನಗುತ್ತಾ ಥಿಯೇಟರ್ ನಿಂದ ಆಚೆ ಬರ್ತಾ ಇದ್ದಾರೆ.

ಉಸ್ತಾದ್ ಭಗತ್ ಸಿಂಗ್

ಈ ಮೂರು ಸ್ಮಾಲ್ ಬಜೆಟ್ ಸಿನಿಮಾಗಳ ಜೊತೆ ತೆಲುಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸಹ ರಿಲೀಸ್ ಆಗಿದೆ. ಇದು ಪವನ್ ಕಲ್ಯಾಣ್ ನಟನೆಯ ಸಿನಿಮಾ. ಅದೇ ಮಾಮೂಲಿ ಮಾಸ್ ಮಸಾಲೆ ಸಿನಿಮಾ. ಜೊತೆಗೆ ರಿಮೇಕ್ ಎಂಬ ಹಣೆ ಪಟ್ಟಿ ಬೇರೆ.. ಹೀಗಾಗಿ ಫ್ರೆಶ್ ನೆಸ್ ಬಯಸೋ ಚಿತ್ರರಸಿಕರು ಈ ಚಿತ್ರವನ್ನ ಸಾರಸಗಟಾಗಿ ತಿರಸ್ಕರಿಸಿದ್ದಾರೆ.

ತೆಲುಗು ನೆಲದಲ್ಲಿ ಒಂದು ಮಟ್ಟಿಗೆ ಒಳ್ಳೆಯ ಓಪನಿಂಗ್ ಪಡ್ಕೊಂಡಿರೋ ಈ ಸಿನಿಮಾ ಪವನ್ ಫ್ಯಾನ್ಸ್ ಬಿಟ್ಟು ನಾರ್ಮಲ್ ಆಡಿಯೆನ್ಸ್ ನ ಇಂಪ್ರೆಸ್ ಮಾಡಿಲ್ಲ.. ಒಟ್ಟಾರೆ ಪ್ಯಾನ್ ಇಂಡಿಯಾ ಯುಗ.. ಕೋಟಿ ಕೋಟಿ ಬಜೆಟ್… ವಿ.ಎಫ್.ಎಕ್ಸ್.. ದೊಡ್ಡ ಸ್ಟಾರ್ ಕಾಸ್ಟ್ ಇದ್ರೆ ಮಾತ್ರ ಜನ ಬರೋದು ಎಂಬ ಮಾತು ಮತ್ತೆ ಮತ್ತೆ ಸುಳ್ಳಾಗ್ತಿದೆ.. ಇನ್ಮೇಲಾದ್ರೂ ಕಥೆಗೆ ಅವಶ್ಯಕತೆ ಇಲ್ಲ ಅಂದ್ರೆ? ಪ್ಯಾನ್ ಇಂಡಿಯಾ ಮಾಡಬೇಕು ಎಂಬ ಹುಚ್ಚಿಗೆ ಬಿದ್ದು ಪ್ಯಾನ್ ಇಂಡಿಯಾ ಮಾಡೋರು ಪಾಠ ಕಲಿಯಲಿ.

You may also like

Leave a Comment