Wednesday, April 15, 2026
Home ತಾಜಾ ಸುದ್ದಿThe All Karnataka Farmers and Traders’ Federation has continued its campaign to stop roll call at the fair and make way for vehicles

The All Karnataka Farmers and Traders’ Federation has continued its campaign to stop roll call at the fair and make way for vehicles

ಸಂತೆಯಲ್ಲಿ ರೋಲ್ ಕಾಲ್ ನಿಲ್ಲಿಸಿ,ವಾಹನ ಓಡಾಟಕ್ಕೆ ದಾರಿ ಬಿಡಿ ಅಭಿಯಾನ ಮುಂದುವರಿಸಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ

by Dharmaraju
0 comments

ಕೆ.ಆರ್.ಪುರ: ಸಂತೆ ಪ್ರದೇಶದ ರಸ್ತೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದರಿಂದ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣವೇ ರಸ್ತೆ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವಂತೆ ರೈತ ಸಂಘದ ಮುಖಂಡ ಎಲೆ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಕೆ.ಆರ್.ಪುರ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಗೋಣಿಚೀಲಗಳನ್ನು ವಸ್ತ್ರದಂತೆ ಧರಿಸಿ ವಿಭಿನ್ನ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ಕುರಿತು ಮಾತನಾಡಿದ ಅವರು, ಎಂ.ಎಸ್. ಬಿಲ್ಡಿಂಗ್ ಬಳಿಯ ಸಂಚಾರಿ ವಿಭಾಗದ ಜಂಟಿ ಆಯುಕ್ತರಿಗೆ ಕಾಲ್ನಡಿಗೆ ಮೂಲಕ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸಂತೆ ಮುಂದೆ ರಸ್ತೆಯನ್ನು ಅರ್ಧಕ್ಕೆ ಮುಚ್ಚಿ ಸುಂಕದ ಹೆಸರಿನಲ್ಲಿ ದಿನಕ್ಕೆ ಸುಮಾರು 50,000 ರಿಂದ 60,000 ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಆಕ್ರಮಣದಿಂದ ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆ ವಾಹನಗಳಿಗೂ ಸರಿಯಾಗಿ ದಾರಿ ಬಿಡುತ್ತಿಲ್ಲ. ಬೆಳಗಿನ ಸಮಯದಲ್ಲಿ ಕೇವಲ 500-600 ಮೀಟರ್ ದೂರ ಸಾಗಲು
10 ರಿಂದ 15 ನಿಮಿಷ ಸಮಯ ಬೇಕಾಗುತ್ತಿದೆ ಎಂದು ವ್ಯಕ್ತಪಡಿಸಿದರು.

ಮಾರ್ಕೆಟ್ ವ್ಯಾಪಾರಿಗಳು ರಸ್ತೆ ಬ್ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು , ಈ ಸಮಸ್ಯೆ ಕುರಿತು ಕಳೆದ ಎರಡು ತಿಂಗಳಿನಿಂದ ಕೆಳಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲಧಿಕಾರಿಗಳವರೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮದ ಗಮನಕ್ಕೆ ವಿಷಯ ಬಂದ ನಂತರ ಸಂಚಾರಿ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಂತರ ಸ್ವಲ್ಪ ಮಟ್ಟಿಗೆ ರಸ್ತೆ ಸ್ವಚ್ಛವಾಗಿರುವುದು ಗಮನಾರ್ಹವಾದರೂ, ಇದನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

ರಸ್ತೆ ಸಂಚಾರದ ಜವಾಬ್ದಾರಿ ಟ್ರಾಫಿಕ್ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಹೇಳಿದರು.
ಬಿಬಿಎಂಪಿ ಅಧಿಕಾರಿಗಳು ಕೂಡ ಅಂಗಡಿಗಳನ್ನು ಒಳಭಾಗಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸಾರ್ವಜನಿಕರು ಸಹ ಸಹಕಾರ ನೀಡಿ ಮುಕ್ತ ಸಂಚಾರಕ್ಕೆ ಸಹಕರಿಸಬೇಕು ಎಂದು ಕೋರಿದರು.
ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದಲ್ಲಿ, ಮುಂದಿನ ಒಂದು ವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

You may also like

Leave a Comment