Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರಮುತ್ಯಾಲಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್, ಇಂದು ನಡೆದ ಸಭೆಯಲ್ಲಿ ಮುಖಂಡರಿಂದ ತೀರ್ಮಾನ

ಮುತ್ಯಾಲಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್, ಇಂದು ನಡೆದ ಸಭೆಯಲ್ಲಿ ಮುಖಂಡರಿಂದ ತೀರ್ಮಾನ

by Raghavendra H A
0 comments

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ದ ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಏಪ್ರಿಲ್ ನಲ್ಲಿ ನಡೆಸಲು ದೇವಾಲಯ ಆಡಳಿತ ಮಂಡಳಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಸುತ್ತೂರುಗಳ ಮುಖಂಡರು ತೀರ್ಮಾನಿಸಿದ್ದಾರೆ.

ನಗರದ ಮುತ್ಯಾಲಮ್ಮ ದೇವಾಲಯದ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅರದಂತೆ ಏಪ್ರಿಲ್ 28ರಂದು ಮಂಗಳವಾರ ರಥೋತ್ಸವ, ಆರತಿಗಳು ಮತ್ತು ಏಪ್ರಿಲ್ 29 ರಂದು ಬುಧವಾರ ಹಗಲು ಪರಿಷೆಯನ್ನು ಪ್ರತಿವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಜಾತ್ರ ನಿಗಧಿ ಮಾಡುವ  ಸಭೆಯಲ್ಲಿ ಶ್ರೀ ಮುತ್ಯಾಲಮ್ಮ ಸೇವಾ ಸಮಿತಿ ದತ್ತಿಯ ಅಧ್ಯಕ್ಷರಾದ ಎಚ್ ಹನುಮಂತು, ಗೌರವಾದ್ಯಕ್ಷರಾದ ಡಿ.ಬಿ.ಹನುಮಂತ ರಾವ್, ಉಪಾಧ್ಯಕ್ಷರಾದ ಕೆ. ನಾಗೇಶ್, ಕಾರ್ಯದರ್ಶಿ ಅರ್. ಪ್ರಭಾಕರ್, ಖಜಾಂಜಿ ಜೆ.ವೈ.ಮಲ್ಲಪ್ಪ,  ಕಾರ್ಯಾಧ್ಯಕ್ಷರು ಡಿ.ಎನ್ ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ಜೆ.ಕುಮಾರ್, ಅಪ್ಪಿ ವೆಂಕಟೇಶ್, ನಗರಸಭಾ ಸದಸ್ಯರಾದ ಟಿ.ಮಂಜುನಾಥ್, ಜಂಟಿ ಕಾರ್ಯದರ್ಶಿ, ಟಿ.ಗೋವಿಂದರಾಜು, ಪ್ರಧಾನ ಅರ್ಚಕರಾದ ಎಚ್.ಅನಂತ ಟ್ರಸ್ಟಿಗಳು ಹಾಗೂ ಏಳೂರ ಗ್ರಾಮಸ್ಥರು ಶಾಂತಿನಗರ  ಸಾಂಸ್ಕೃತಿಕ ಕಲಾಸಂಘದ ಪದಾಧಿಕಾರಿಗಳು, ಏಳೂರಿನ ಗ್ರಾಮಗಳಾದ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ,ಶಾಂತಿನಗರ, ನಾಗಸಂದ್ರ, ಕೊಡಿಗೇಹಳ್ಳಿ, ರೋಜಿಪುರ, ಕಛೇರಿಪಾಳ್ಯ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಮಸ್ಥರು ಭಕ್ತಾದಿಗಳು ಭಾಗವಹಿಸಿದ್ದರು.

You may also like

Leave a Comment