Wednesday, April 15, 2026
Home ಬೆಂಗಳೂರು ನಗರ1ನೇ ತರಗತಿ ಶಾಲಾ ಪ್ರವೇಶ ವಯೋ ಸಡಿಲಿಕೆ ಸಿಬಿಎಸ್‌ಇಗೂ ಅನ್ವಯ: ಸಚಿವ ಮಧು ಬಂಗಾರಪ್ಪ

1ನೇ ತರಗತಿ ಶಾಲಾ ಪ್ರವೇಶ ವಯೋ ಸಡಿಲಿಕೆ ಸಿಬಿಎಸ್‌ಇಗೂ ಅನ್ವಯ: ಸಚಿವ ಮಧು ಬಂಗಾರಪ್ಪ

by Raghavendra H A
0 comments

ಬೆಂಗಳೂರು: 2026-27ರ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಯ ಪ್ರವೇಶ ವಯೋಮಿತಿಯಲ್ಲಿ ನೀಡಲಾಗಿರುವ 60 ದಿನಗಳ ವಿನಾಯಿತಿಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪಠ್ಯಕ್ರಮ (ಸಿಬಿಎಸ್‌ಇ, ಐಸಿಎಸ್‌ಇ) ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷಕ್ಕೆ 60 ದಿನಗಳ ವಿನಾಯಿತಿಯನ್ನು 1983ರ ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಪರಿಗಣಿಸಿ ನೀಡಲಾಗಿದೆ. ಕಾಯ್ದೆಯಡಿ 5 ವರ್ಷ 10 ತಿಂಗಳು ಆಗಿರುವ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಅವಕಾಶ ನೀಡುತ್ತದೆ. ಸದ್ಯ ನಾವು ಈ ನಿಯಮವನ್ನೇ ಪಾಲಿಸುತ್ತೇವೆ. ರಾಜ್ಯ ಶಿಕ್ಷಣ ನೀತಿ ಶಿಫಾರಸು ಸಂಪುಟದ ಮುಂದೆ ಮಂಡಿಸ ಬೇಕಿದ್ದು, ನಂತರ ಕಾಯಂ ಆಗಿ ಆದೇಶ ಹೊರಡಿಸುತ್ತೇವೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಆಟಕುಂಟು, ಲೆಕ್ಕಕ್ಕಿಲ್ಲ!

ಎಸ್‌ಎಸ್‌ಎಲ್‌ಸಿ ಪರೀ ಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸ ದಿರಲು ತೀರ್ಮಾನಿಸಿದೆ. ಸರ್ಕಾರ ತನ್ಮೂಲಕ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ 525 ಅಂಕಗಳಿಗೆ ಮರು ನಿಗದಿ ಯಾಗಿದ್ದು, ಹಿಂದಿ, ಸಂಸ್ಕೃತ ಸೇರಿ 3ನೇ ಭಾಷೆಗಿನ್ನು ಅಂಕಗಳ ಬದಲು ಗ್ರೇಡ್ ನೀಡಲು ನಿರ್ಧರಿಸಲಾಗಿದೆ. ಇದರಿಂದ ಈ ಭಾಷೆಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ. ತೃತೀಯ ಭಾಷೆ ಪರೀಕ್ಷೆಯಲ್ಲಿ ಪಡೆಯುವ ಗ್ರೇಡ್ ವಿದ್ಯಾರ್ಥಿಗಳ ಉತ್ತೀರ್ಣತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಬದಲಾವಣೆಗಳು ಈ ವರ್ಷದ ಪರೀಕ್ಷೆಯಿಂದಲೇ ಅನ್ವಯವಾಗಲಿದೆ. ಈ ಕುರಿತು ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

You may also like

Leave a Comment