Wednesday, April 15, 2026
Home ಕ್ರೀಡೆIPL 2026: ಪಡಿಕ್ಕಲ್, ಪಟಿದಾರ್ ಅಬ್ಬರ, ಕೊಹ್ಲಿ ಅರ್ಧಶತಕ; ಹೈದರಾಬಾದ್ ಮಣಿಸಿ ಶುಭಾರಂಭ ಮಾಡಿದ ಚಾಂಪಿಯನ್ಸ್ ಆರ್‌ಸಿಬಿ.

IPL 2026: ಪಡಿಕ್ಕಲ್, ಪಟಿದಾರ್ ಅಬ್ಬರ, ಕೊಹ್ಲಿ ಅರ್ಧಶತಕ; ಹೈದರಾಬಾದ್ ಮಣಿಸಿ ಶುಭಾರಂಭ ಮಾಡಿದ ಚಾಂಪಿಯನ್ಸ್ ಆರ್‌ಸಿಬಿ.

by Dharmaraju
0 comments

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ನಡೆದ ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವಿನೊಂದಿಗೆ ಟೂರ್ನಿಗೆ ಶುಭಾರಂಭ ಮಾಡಿದೆ.

ಸನ್‌ರೈಸರ್ಸ್ ಹೈದರಾಬಾದ್ ನೀಡಿದ 202 ರನ್‌ಗಳ ಭಾರೀ ಗುರಿಯನ್ನು ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ ಬೆನ್ನಟ್ಟಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 200+ ರನ್‌ಗಳ ಚೇಸ್ ಮಾಡಿದ ದಾಖಲೆ ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 201 ರನ್ ಕಲೆಹಾಕಿತು. ನಾಯಕ ಇಶಾನ್ ಕಿಶನ್ 38 ಎಸೆತಗಳಲ್ಲಿ 80 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅನಿಕೇತ್ ವರ್ಮಾ 43 ರನ್ ಹಾಗೂ ಹೆನ್ರಿಕ್ ಕ್ಲಾಸೆನ್ 31 ರನ್ ಸೇರಿಸಿದರು.

ಬೌಲಿಂಗ್‌ನಲ್ಲಿ ಆರ್‌ಸಿಬಿ ಪರ ಜಾಕೋಬ್ ಡಫಿ 3 ವಿಕೆಟ್ ಪಡೆದು ಮಿಂಚಿದರೆ, ರೊಮೆರೊ ಶೆಫರ್ಡ್ ಕೂಡ 3 ವಿಕೆಟ್ ಕಿತ್ತು ಮಹತ್ವದ ಕೊಡುಗೆ ನೀಡಿದರು.
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿ ಹಿನ್ನಡೆಯಾದರೂ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ ಪಡಿಕ್ಕಲ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಪಂದ್ಯವನ್ನು ತಿರುಗಿಸಿದರು. ಅವರು 26 ಎಸೆತಗಳಲ್ಲಿ 61 ರನ್ ಗಳಿಸಿದರು.

ಇನ್ನೊಂದೆಡೆ, ವಿರಾಟ್ ಕೊಹ್ಲಿ ಅಜೇಯ 69 ರನ್‌ಗಳ ಶ್ರೇಷ್ಠ ಇನ್ನಿಂಗ್ಸ್ ಆಡುತ್ತಾ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಇವರಿಬ್ಬರ ನಡುವೆ ಶತಕದ ಜೊತೆಯಾಟ ನಿರ್ಮಾಣವಾಗಿದ್ದು, ಗೆಲುವಿಗೆ ಬಲವಾದ ಅಡಿಪಾಯವಾಯಿತು.

ನಾಯಕ ರಜತ್ ಪಟಿದಾರ್ 31 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದ ಪರಿಣಾಮ, ಆರ್‌ಸಿಬಿ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಈ ಜಯದೊಂದಿಗೆ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಎಸ್‌ಆರ್‌ಹೆಚ್ ವಿರುದ್ಧ 190+ ರನ್‌ಗಳ ಗುರಿ ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆ ಮಾಡಿದೆ.

You may also like

Leave a Comment