ಮಹದೇವಪುರ: ಹೊಸುರು ಬಂಡೆಯ ಶ್ರೀ ಕೃಷ್ಣ ಸೇವಾ ಗೋ ಶಾಲೆಯ ಗೋದಾಮುಗಳು ಬೆಂಕಿ ಅವಘಡದಿಂದ ಹಳಾಗಿದ್ದ ಸ್ಥಳವನ್ನು ಮಾಜಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಗೋ ಪ್ರೇಮಿಗಳ ಸಹಕಾರದಿಂದ ಸ್ವಚ್ಚಗೊಳಿಸಲಾಯಿತು.
ನಂತರ ಮಾತನಾಡಿದ ಮಾಜಿ ಶಾಸಕರು ಅವಘಡ ಸಂಭವಿಸಿದ ಮೊದಲ ದಿನದಿಂದಲೇ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಶಂಸಿಸಿದರು.
ಗೋಶಾಲೆಯನ್ನು ಪುಖರಾಜ್ ಮಹಾರಾಜರು ನಿರ್ವಹಿಸುತ್ತಿದ್ದು, ಇದನ್ನ ಸಹಿಸದ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ದನಗಳ ದಾಸ್ತಾನು ಮಾಡಿದ ಹುಲ್ಲಿಗೆ ಬೆಂಕಿ ಹಚ್ಚಿ ಎರಡು ಶೆಡ್ ಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದರು.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬೆಂಕಿಯಿಂದ ಹಾನಿಗೊಂಡ ಎರಡು ದೊಡ್ಡ ಶೆಡ್‌ಗಳ ಪುನರ್ ನಿರ್ಮಾಣಕ್ಕೆ ದಾನಿಗಳು ಮುಂದೆ ಬಂದಿದ್ದು, ಗೋಶಾಲೆಗೆ ಭದ್ರತಾ ಗೋಡೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜನರೇಟರ್ ಅಗತ್ಯವಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಜೈನ್ ಸಮಾಜದ ಯುವಕರು ಮತ್ತು ನಮ್ಮ ಮುಖಂಡರು ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಸುಮಾರು 1,158ಕ್ಕೂ ಹೆಚ್ಚು ಗೋವುಗಳನ್ನು ಹೊಂದಿರುವ ಈ ಗೋಶಾಲೆಯಲ್ಲಿ ಬಹುತೇಕವು ಕಸಾಯಿಕಾನೆಯಿಂದ ರಕ್ಷಿಸಲ್ಪಟ್ಟ ಗೋವುಗಳಾಗಿವೆ. ಗೋಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಗೋ ಶಾಲೆಯ ಸಮಗ್ರ ಅಭಿವೃದ್ಧಿಗೆ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಮತ್ತು ಗೋ ಸಂಪತ್ತಿನ ಉಳಿವಿಗೆ ನಾವು ಬದ್ದರಾಗಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಹೆಚ್ ಎಸ್ ಪಿಳ್ಳಪ್ಪ, ಕಣ್ಣೂರು ಪಂಚಾಯತಯುವಕರು ಅಧ್ಯಕ್ಷ ಅಶೋಕ್, ಮುಖಂಡರಾದ ಚನ್ನಸಂದ್ರ ಚಂದ್ರ ಶೇಖರ್, ಕಿತ್ತಗನೂರು ಶ್ರೀನಿವಾಸ್, ಮಾರುತಿಕುಮಾರ್,ಕಿಶೋರ್, ಸುಂದರ್, ದೊಡ್ಡಣ್ಣ, ಮಹೇಶ್, ಕಾರ್ಯಕರ್ತರು ಹಾಗೂ ಗೋಪ್ರೇಮಿಗಳು ಉಪಸ್ಥಿತರಿದ್ದರು.
