Wednesday, April 15, 2026
Home ಅಪರಾಧ ಸುದ್ದಿಸ್ನೇಹಿತರ ಜೊತೆ ನದಿಗೆ ಈಜಲು ಹೋದ ಯುವಕ ನೀರುಪಾಲು…!!!

ಸ್ನೇಹಿತರ ಜೊತೆ ನದಿಗೆ ಈಜಲು ಹೋದ ಯುವಕ ನೀರುಪಾಲು…!!!

by Dharmaraju
0 comments

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿತಾಣ ಎಡಮುರಿ ಕಾವೇರಿ ನದಿಯಲ್ಲಿ ಈಜಲು ಹೋಗಿ‌ದ್ದ ವೇಳೆ ನೀರಿನಲ್ಲಿ ಮಳುಗಿ‌ ಯುವಕ ಸಾ*ವನ್ನಪ್ಪಿದ್ದಾನೆ.

ಬೆಂಗಳೂರಿನ ರಾಮಮೂರ್ತಿ ನಗರದ ಪಾಂಡೆಯನ್‌ ಅವರ ಮಗ, ಇನ್ಫೋಸಿಸ್ ಕಂಪೆನಿಯ ಉದ್ಯೋಗಿ ವಿಘ್ನೇಶ್.ಪಿ (27) ಎಂಬವರು ಮೃತಟ್ಟಿದ್ದಾರೆ

ವಿಘ್ನೇಶ್ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಲಮುರಿಗೆ ಆಗಮಿಸಿದ್ದ, ಈ ವೇಳೆ ನದಿ ನೀರಲ್ಲಿ ಈಜಲು ಹೋದಾನ ಮುಳುಗಿ ಮೃ*ತಪಟ್ಟಿದ್ದಾನೆ. ಮೃತದೇಹವನ್ನ ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ.ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸಿತಾಣಗಳಲ್ಲಿ ಈಜುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಕರೆಗಂಟೆಯಾಗಿದೆ.

You may also like

Leave a Comment