Wednesday, April 15, 2026
Home ಜಿಲ್ಲಾ‌ಸುದ್ದಿಕಾರು-ಲಾರಿ ಡಿಕ್ಕಿ, ನವವಿವಾಹಿತೆ ಸ್ಥಳದಲ್ಲೇ ಸಾ*ವು

ಕಾರು-ಲಾರಿ ಡಿಕ್ಕಿ, ನವವಿವಾಹಿತೆ ಸ್ಥಳದಲ್ಲೇ ಸಾ*ವು

by Dharmaraju
0 comments

ಚಿಕ್ಕಬಳ್ಳಾಪುರ: ಕಾರು-ಲಾರಿ ಡಿಕ್ಕಿಯಾದ ಪರಿಣಾಮ ನವವಿವಾಹಿತೆ ಹಾಗೂ ಸಂಬಂಧಿ ಸ್ಥಳದಲ್ಲಿಯೇ ಸಾ*ವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ.

ಮಾಹಿತಿ ಪ್ರಕಾರ, ಈ ಅಪಘಾತದಲ್ಲಿ ಪತಿ ಸ್ಥಿತಿ ಗಂಭೀರವಾಗಿದೆ. ಇನ್ನು ಮೃ*ತ ನವವಿವಾಹಿತೆಯನ್ನ 23 ವರ್ಷದ ರಕ್ಷಿತಾ ರೆಡ್ಡಿ ಹಾಗೂ ಸಂಬಂಧಿಯನ್ನ 30 ವರ್ಷದ ಪವನ್ ರೆಡ್ಡಿ ಗುರುತಿಸಲಾಗಿದೆ. ಇನ್ನು ರಕ್ಷಿತಾ ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ಮದುವೆ ಆಗಿದ್ದ ರಕ್ಷಿತಾ ಹಾಗೂ ರಾಜಶೇಖರ್‌ ಕಳೆದ ನವೆಂಬರ್‌ ತಿಂಗಳಿನಲ್ಲಿ ಮದುವೆ ಆಗಿದ್ದರು. ಈ ಜೋಡಿ ತಮ್ಮ ಸಂಬಂಧಿ ಪವನ್‌ ರೆಡ್ಡಿ ಜೊತೆಗೆ ಅನಂತಪುರದ ಅವರ ಊರಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ರಕ್ಷಿತಾ ಹಾಗೂ ಪವನ್ ಸ್ಥಳದಲ್ಲಿ ಸಾ*ವಿಗೀಡಾಗಿದ್ದಾರೆ.

ಇನ್ನು ಗಂಭೀರವಾಗಿ ಗಾಯಗೊಂಡಿರುವ ಪತಿ ರಾಜಶೇಖರ್ ಅವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

You may also like

Leave a Comment