Wednesday, April 15, 2026
Home ಅಪರಾಧ ಸುದ್ದಿ19ನೇ ವಯಸ್ಸಿಗೆ_ರೌಡಿಶೀಟರ್ ಪಟ್ಟ : ಕೊನೆಗೆ ಸ್ನೇಹಿತರಿಂದಲೇ ಚಟ್ಟ..

19ನೇ ವಯಸ್ಸಿಗೆ_ರೌಡಿಶೀಟರ್ ಪಟ್ಟ : ಕೊನೆಗೆ ಸ್ನೇಹಿತರಿಂದಲೇ ಚಟ್ಟ..

by Dharmaraju
0 comments

ಮದ್ದೂರು:- ಇಂತಾದ್ದೊಂದು ಬರ್ಬ ಹತ್ಯೆ ನಡೆದಿರೋದು ಮಂಡ್ಯದ ಮದ್ದೂರಿನಲ್ಲಿ.
ನಿನ್ನೆ ತಡರಾತ್ರಿ ಮದ್ದೂರಿನ ಕೊಲ್ಲಿ ವೃತ್ತದ ಬಳಿ ಸೌದೆ ಡಿಪೋ ಒಂದರ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ವೇಳೆ ಯಶ್ವಂತ್, ಸಚಿನ್ ಹಾಗೂ ದರ್ಶನ್ ಎಂಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

ಈ ವೇಳೆ ಯಶ್ವಂತ್ ಸ್ಥಳದಲ್ಲೆ ಸಾವನ್ನಪ್ಪಿದ್ರೆ, ಉಳಿದ ಸಚಿನ್ ಹಾಗೂ ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಂದ ಹಾಗೆ ಈ ದೃಶ್ಯದಲ್ಲಿ ಕಾಣ್ತಿರೋ ಈತನ ಹೆಸರು ಯಶ್ವಂತ್ ಅಂತ. ಮದ್ದೂರಿನ ಮರಳಿಗ ಗ್ರಾಮದವನು. ಈತನಿಗೆ ವಯಸ್ಸಿನ್ನು 19 ವರ್ಷ ಅಷ್ಟೆ. ವಯಸ್ಸು ಚಿಕ್ಕದಾದ್ರೂ ಫೀಲ್ಡಲ್ಲಿ ಹವಾ ಸೃಷ್ಟಿ ಮಾಡೋ ಕನಸ್ಸು ಕಂಡಿದ್ದ ಯಶ್ವಂತ್ ರೌಡಿ ಶೀಟರ್ ಆಗಿದ್ದ. ಅಪ್ಪ ಅಮ್ಮ ಎಷ್ಟು ಹೇಳಿದ್ರು ಕೇಳದೆ ಪುಂಡರ ಸಹವಾಸ ಮಾಡಿದ್ದ.

ಇನ್ನು ಯಶ್ವಂತ್ ಉಪಟಳ ಹೆಚ್ಚಾಗ್ತಿದ್ದಂತೆ ಮದ್ದೂರು ಪೊಲೀಸರು ಯಶ್ವಂತ್ ನನ್ನ ಗಡಿಪಾರು ಮಾಡಿದ್ದರು. ಬಳಿಕ ಯಶ್ವಂತ್ ಮದ್ದೂರು ತೊರೆದು 6 ತಿಂಗಳ ಕಾಲ ಬೆಂಗಳೂರು ಸೇರಿದ್ದ. ಆದ್ರೆ ಈ ನಡುವೆ ಸಂಬಂಧಿಕರೊಬ್ಬರ ಮದುವೆ ಇದ್ದ ಹಿನ್ನೆಲೆ ಗ್ರಾಮಕ್ಕೆ ಮರಳಿ ಇಲ್ಲೆ ಓಡಾಟ ಮಾಡಿದ್ದ. ಹೀಗಿರುವಾಗ್ಲೆ ನಿನ್ನೆ ಹಳೆ ಗಲಾಟೆಯ ರಾಜಿ ಪಂಚಾಯ್ತಿಯ ಬುಲಾವ್ ಬಂದಿತ್ತು. ಇದರ ರಾಜಿಗೆ ಹೋದ ಯಶ್ವಂತ್ ಹೆಣವಾಗಿದ್ದಾನೆ.

ಇನ್ನು ಘಟನೆ ಬಳಿಕ ಸ್ಥಳಕ್ಕೆ ತೆರಳಿದ ಮದ್ದೂರು ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಇತ್ತ ಮಂಡ್ಯ ಮಿಮ್ಸ್ ನಲ್ಲಿ ಯಶ್ವಂತ್ ಮರೋಣೋತ್ತರ ಪರೀಕ್ಷೆ ನಡೆಸಿದ್ದು, ಮೃತ ದೇಹವನ್ನ ಕುಟುಂಬಸ್ಥರಿಗೆ ನೀಡಿದ್ದಾರೆ.ಆದರೆ ಮಗನ ಸಾವಿಗೆ ಯಶ್ವಂತ್ ಕುಟುಂಬ ಕಣ್ಣೀರು ಹಾಕುತ್ತಿದೆ.

You may also like

Leave a Comment