Tuesday, May 19, 2026
Home ಬೆಂಗಳೂರು ನಗರಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

by Dharmaraju
0 comments

ಮಹದೇವಪುರ: ಕ್ಷೇತ್ರದಲ್ಲಿ ರಸ್ತೆ,ಚರಂಡಿ ಮೂಲಭೂತ ಸೌಕರ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ಹೇಳಿದರು

ಕ್ಷೇತ್ರದ ಭೈರತಿ,ಭೈರತಿ ಬಂಡೆ, ಬೆಳೇಶಿವಾಲೆ, ಬೆಳತೂರು ಕಾಲೋನಿ, ಕುಂಬೇನ ಅಗ್ರಹಾರ ಕೊಡುಗೆಹಳ್ಳಿ , ಅಯ್ಯಪ್ಪ ನಗರ, ಹೂಡಿ,ತಿಗಳರಪಾಳ್ಯದಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಮೂಲಭೂತ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು,

ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಅನುದಾನ ನೀಡದೆ ಧೋರಣೆಯನ್ನು ಮಾಡುತ್ತಿದ್ದು ಬಂದಿರುವ ಅಲ್ಪಸ್ವಲ್ಪ
ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.
ಸಾರ್ವಜನಿಕರಿಗೆ ಬಹುಮುಖ್ಯವಾಗಿ ಬೇಕಿರುವ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಲ್ಪಿಸುತ್ತೇವೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಿ ಅನುದಾನ ತಂದು ಕ್ಷೇತ್ರದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಗುತ್ತಿದಾರರು ಸಾರ್ವಜನಿಕರಿಗೆ ತೊಂದರೆ ಆಗದಂತೆ,ಮಳೆಗಾಲ ಆರಂಭಕ್ಕೂ ಮೊದಲೆ ಕಾಮಗಾರಿ ಪೂರ್ಣಗೊಳಿಸಿ,ಸರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದರು.
ಶೀಘ್ರ ಕಾಮಗಾರಿಯನ್ನು ಆರಂಭಿಸಿ ಯಾವುದೇ ಲೋಪ ದೋಷಗಳು ಬರದಂತೆ ಪೂರ್ಣಗೊಳಿಸಬೇಕೆಂದು ತಿಳಿಸಿದರು .

ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮುಖಂಡರಾದ ಆರ್ ರಾಮಾಂಜನೇಯ, ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಇದ್ದರು.

You may also like

Leave a Comment