Tuesday, May 19, 2026
Home ಶಿಕ್ಷಣSSLC Result:ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ.

SSLC Result:ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ.

by Dharmaraju
0 comments

ಬೆಂಗಳೂರು: ರಾಜ್ಯದ ಲಕ್ಷಾಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಯುತ್ತಿದ್ದ ಫಲಿತಾಂಶಕ್ಕೆ ಅಂತಿಮವಾಗಿ ಮುಹೂರ್ತ ನಿಗದಿಯಾಗಿದೆ. ತೃತೀಯ ಭಾಷೆ (ಹಿಂದಿ) ಅಂಕಗಳ ಹಂಚಿಕೆ ವಿಚಾರವಾಗಿ ಸೃಷ್ಟಿಯಾಗಿದ್ದ ಕಾನೂನು ಗೊಂದಲಗಳಿಗೆ ತೆರೆಬಿದ್ದಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ.

ಕೋರ್ಟ್ ಆದೇಶದಿಂದ ಫಲಿತಾಂಶ ವಿಳಂಬವಾಗಬಹುದು ಎಂಬ ಆತಂಕ ಪೋಷಕರಲ್ಲಿತ್ತು. ಆದರೆ ಇದಕ್ಕೆ ತೆರೆ ಎಳೆದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಧ್ಯಾಹ್ನ 12 ಗಂಟಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಲಿದೆ.

ಯಾವುದೇ ತಾಂತ್ರಿಕ ಅಡ್ಡಿಯಿಲ್ಲ “ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಈ ವರ್ಷದಿಂದಲೇ ಅಂಕ ನೀಡುವ ಪದ್ಧತಿ ಜಾರಿಯಾಗಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಈ ಕುರಿತು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲಾಗಿದೆ. ಅವರ ಸೂಚನೆಯ ಮೇರೆಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್ ಎಸ್ ಎಲ್ ಪರೀಕ್ಷೆ 1ರ ಫಲಿತಾಂಶ ಪ್ರಕಟಿಸುವುದಾಗಿ ” ಎಂದು ಸಚಿವರು ತಿಳಿಸಿದ್ದಾರೆ.

ಫಲಿತಾಂಶ ವೀಕ್ಷಿಸುವುದು ಹೇಗೆ? (ಹಂತ-ಹಂತದ ಮಾಹಿತಿ)
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ಸರಳ ಹಂತಗಳ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:karresults.nic.in ಅಥವಾ kseab.karnataka.gov.in.
ಲಿಂಕ್ ಆಯ್ಕೆ ಮಾಡಿ: ಮುಖಪುಟದಲ್ಲಿ ಕಾಣುವ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮಾಹಿತಿ ನಮೂದಿಸಿ: ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (DOB) ಸರಿಯಾಗಿ ನಮೂದಿಸಿ.
ಸಲ್ಲಿಸಿ: ‘Submit’ ಬಟನ್ ಒತ್ತಿರಿ.
ಅಂಕಪಟ್ಟಿ ಪಡೆಯಿರಿ: ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಮುಂದಿನ ದಾಖಲೆಗಾಗಿ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು: ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮತ್ತು KarnatakaOne ಅಪ್ಲಿಕೇಶನ್ ಮೂಲಕವೂ ಫಲಿತಾಂಶವನ್ನು ಪಡೆಯಬಹುದಾಗಿದೆ.

You may also like

Leave a Comment