ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು, ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ಸ್ವಯಂ ಚಾಲಿತ ರಸ್ತೆ ಸ್ವೀಪಿಂಗ್ ಯಂತ್ರವನ್ನು ನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೆಚ್‌ಡಿಎಫ್‌ಸಿ ಬ್ಯಾಂಕ್ ಕೋರಮಂಗಲ 1ನೇ ಬ್ಲಾಕ್ ಶಾಖೆಯ ವತಿಯಿಂದ ಈ ಯಂತ್ರವನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಯಾಂತ್ರೀಕೃತ ರಸ್ತೆ ಸ್ವಚ್ಛತಾ ಯಂತ್ರಗಳ ಮೂಲಕ ನಗರದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಆಯುಕ್ತರು ತಿಳಿಸಿದರು.
*ಸ್ವಯಂಚಾಲಿತ ಸ್ವೀಪಿಂಗ್ ಯಂತ್ರದ ವಿವರಗಳು*
ಈ ಯಂತ್ರವು ನಗರ ಪ್ರದೇಶಗಳಲ್ಲಿ ಪರಿಣಾಮಕಾರಿ ಸ್ವಚ್ಛತೆಗೆ ಅಶೋಕ್ ಲೇಲ್ಯಾಂಡ್ ಯಿಂದ ವಿನ್ಯಾಸಗೊಳಿಸಲಾದ ಅತ್ಯಾಧುನಿಕ TPS-VACSWEEP-5000 SPF ಮಾದರಿಯ ಸ್ವೀಪಿಂಗ್ ಯಂತ್ರವಾಗಿದೆ.

ಮುಖ್ಯ ವೈಶಿಷ್ಟ್ಯಗಳು:
ಬಳಕೆ: ನಗರ ರಸ್ತೆಗಳು, ಪಾರ್ಕಿಂಗ್ ಪ್ರದೇಶಗಳು ಹಾಗೂ ಇತರ ಪೇವ್ಡ್ ಪ್ರದೇಶಗಳ ಸ್ವಚ್ಛತೆಗೆ ಸೂಕ್ತವಾಗಿದೆ.
*ಚಾಲನೆ ಪ್ರಕಾರ: ಸ್ವಯಂ ಚಾಲಿತ (Self-Propelled), ಹೈಡ್ರೋಸ್ಟಾಟಿಕ್ ಡ್ರೈವ್
* ಶಕ್ತಿ: 118 ಕಿಲೋವಾಟ್ / 158 ಹಾರ್ಸ್ ಪವರ್ @ 2200 ಆರ್. ಪಿಎಂ
* ಕೂಲಿಂಗ್ ವ್ಯವಸ್ಥೆ: ವಾಟರ್ ಕೂಲ್ಡ್, ಟರ್ಬೋಚಾರ್ಜ್ಡ್
* ಹಾಪರ್ ಸಾಮರ್ಥ್ಯ: 5.0 – 6.0 ಕ್ಯೂಬಿಕ್ ಮೀಟರ್ (ಸುಮಾರು)
* ನೀರಿನ ಟ್ಯಾಂಕ್ ಸಾಮರ್ಥ್ಯ: 400 ಲೀಟರ್
* ಆಯಾಮದ ಗಾತ್ರ (ಉದ್ದ × ಅಗಲ × ಎತ್ತರ): 5850 ಮಿಮೀ × 2200 ಮಿಮೀ × 3100 ಮಿಮೀ (ಸುಮಾರು)
* ಡಂಪಿಂಗ್ ಎತ್ತರ: 1550 ಮಿಮೀ
* ಸ್ವೀಪಿಂಗ್ ಅಗಲ: 3500 ಮಿಮೀ (ಮುಖ್ಯ ಬ್ರಷ್ + ಸೈಡ್ ಬ್ರಷ್ + ಫ್ರಂಟ್ ವ್ಯವಸ್ಥೆ)
* ಸಕ್ಷನ್ ಹೋಸ್: 4 ಮೀಟರ್ ಉದ್ದ
* ಚಲನೆಯ ವೇಗ: 0–40 ಕಿಮೀ/ಗಂ
* ಸ್ವೀಪಿಂಗ್ ವೇಗ: 4–10 ಕಿಮೀ/ಗಂ (ರಸ್ತೆಯ ಸ್ಥಿತಿ ಮತ್ತು ಧೂಳು ಪ್ರಮಾಣಕ್ಕೆ ಅನುಗುಣವಾಗಿ)
* ಸಕ್ಷನ್: ವ್ಯಾಕ್ಯೂಮ್ ಆಧಾರಿತ ನೇರ ಸಕ್ಷನ್
* ಫಿಲ್ಟರ್: ಪ್ಲೀಟೆಡ್ ಬ್ಯಾಗ್ ಫಿಲ್ಟರ್‌ಗಳು
* ಫಿಲ್ಟರ್ ಕ್ಲೀನಿಂಗ್: ರಿವರ್ಸ್ ಕಾಂಪ್ರೆಸ್ಡ್ ಏರ್ ಜೆಟ್ ವ್ಯವಸ್ಥೆ
* ಹೈ ಪ್ರೆಶರ್ ವಾಟರ್ ಜೆಟ್ಟಿಂಗ್:
* ಪಂಪ್ ಸಾಮರ್ಥ್ಯ: ಸುಮಾರು 21 LPM @ 150 ಬಾರ್
*ಆಯುಕ್ತರಿಂದ ಸ್ವಯಂ ಚಾಲಿತ ಸ್ವೀಪಿಂಗ್ ಯಂತ್ರ ಚಾಲನೆ*
ಯಾಂತ್ರಿಕ ಸ್ವಯಂ ಚಾಲಿತ ಯಂತ್ರದ ಹಸ್ತಾಂತರ ಪಡೆದ ನಂತರ ಆಯುಕ್ತರು ಖುದ್ದಾಗಿ ಯಂತ್ರವನ್ನು ಚಾಲನೆ ಮಾಡಿದರು. ತಂತ್ರಜ್ಞರಿಂದ ಯಾಂತ್ರೀಕೃತ ಸ್ವಯಂಚಾಲಿತ ಯಂತ್ರದ ಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ನಗರಾಭಿವೃದ್ಧಿಗೆ ಸಿ.ಎಸ್.ಆರ್ ಮೂಲಕ ಹೆಚ್‌ಡಿಎಫ್‌ಸಿ ಬ್ಯಾಂಕ್ ನೀಡಿರುವ ಸಹಕಾರವನ್ನು ಮೆಚ್ಚುವಂತಹುದು. ನಗರದ ಸ್ವಚ್ಛತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ–ಖಾಸಗಿ ಸಹಭಾಗಿತ್ವದ ಮಹತ್ವವನ್ನು ಈ ಕಾರ್ಯಕ್ರಮ ಒತ್ತಿಹೇಳುತ್ತದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ.
ಇಂತಹ ಆಧುನಿಕ ಯಂತ್ರೋಪಕರಣಗಳು ನಗರದಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತವೆ, ಇತರೆ ಕಾರ್ಪೊರೇಟ್ ಸಂಸ್ಥೆಗಳೂ ತಮ್ಮ ಸಿ.ಎಸ್.ಆರ್ ನಿಧಿಯನ್ನು ಸಾರ್ವಜನಿಕ ಹಿತದ ಯೋಜನೆಗಳಿಗೆ ವಿನಿಯೋಗಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಅಪರ ಆಯುಕ್ತರು (ಅಭಿವೃದ್ಧಿ) – ಲೋಖಂಡೆ ಸ್ನೇಹಲ್ ಸುಧಾಕರ್,ಅಪರ ಆಯುಕ್ತರು (ಕಂದಾಯ) – ಡಾ. ಪ್ರಜ್ಞಾ ಅಮ್ಮೆಂಬಳ,ಮುಖ್ಯ ಅಭಿಯಂತರರು – ಎಂ. ಲೋಕೇಶ್ ಹಾಗೂ ಕೃಷ್ಣಮೂರ್ತಿ,ಉಪ ಹಣಕಾಸು ನಿಯಂತ್ರಕರು – ಮಂಜುನಾಥ್. ಹೆಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ:
ನವೀನ್ ಕುಮಾರ್ ಮಾರೇಗೌಡ – ಕ್ಲಸ್ಟರ್ ಹೆಡ್ ಮತ್ತು ಸೀನಿಯರ್ ವೈಸ್ ಪ್ರೆಸಿಡೆಂಟ್,ಎ. ಪ್ರಸನ್ನ ಕೃಷ್ಣನ್ – ಝೋನಲ್ ಹೆಡ್,ವೇದಾಂತಂ – ಝೋನಲ್ ಹೆಡ್,ಅಹ್ಮದ್ ಜಕಾರಿಯಾ – ಬ್ರಾಂಚ್ ಬ್ಯಾಂಕಿಂಗ್ ಹೆಡ್
ರಾಜೀವ್ ಮಂಡೋಡಿ – ಬ್ರಾಂಚ್ ಮ್ಯಾನೇಜರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.