Tuesday, May 19, 2026
Home ದೇಶ/ವಿದೇಶ19300 ರೂ ವಿಥ್‌ಡ್ರಾ ಮಾಡಲು ಸಮಾಧಿಯಿಂದ ಸಹೋದರಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಸಹೋದರ.

19300 ರೂ ವಿಥ್‌ಡ್ರಾ ಮಾಡಲು ಸಮಾಧಿಯಿಂದ ಸಹೋದರಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಸಹೋದರ.

by Dharmaraju
0 comments

ಒಡಿಶಾದ ಗ್ರಾಮೀಣ ಬ್ಯಾಂಕ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಸಹೋದರನೊಬ್ಬ ತನ್ನ ಸಹೋದರಿ ಖಾತೆಯಲ್ಲಿದ್ದ ಹಣವನ್ನು ವಿಥ್‌ಡ್ರಾ ಮಾಡುವ ಸಲುವಾಗಿ ಹೂತುಹಾಕಿದ್ದ ಆಕೆಯ ಹೆಣವನ್ನು ಸಮಾಧಿಯಿಂದ ಕಿತ್ತು ತಂದಿದ್ದಾನೆ.

ಜಿತು ಮುಂಡ ಎಂಬಾತ ಈ ಕೃತ್ಯ ಎಸಗಿರುವ ವ್ಯಕ್ತಿ.
ಈತನ ಸಹೋದರಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾಯುವ ಮುನ್ನ ಕಲ್ರ ಮುಂಡ ಸೋದರ ಜಿತು ಬಳಿ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂಪಾಯಿಗಳಿದ್ದು, ಅದನ್ನು ಪಡೆದುಕೊಳ್ಳುವಂತೆ ಹೇಳಿದ್ದರು.

ಅದರಂತೆ ಜಿತು ಮುಂಡ ಹಣ ಪಡೆದುಕೊಳ್ಳಲು ಬ್ಯಾಂಕ್‌ಗೆ ತೆರಳಿದಾಗ ಬ್ಯಾಂಕ್ ಸಿಬ್ಬಂದಿ ಖಾತಾದಾರರನ್ನು ಕರೆದುಕೊಂಡು ಬಾ ಇಲ್ಲವೇ ನೀನು ಹೇಳುವ ಹಾಗೆ ಮೃತಪಟ್ಟಿದ್ದರೆ ಮರಣ ಪತ್ರದ ಸಾಕ್ಷಿ ತೆಗೆದುಕೊಂಡು ಬಾ ಎಂದಿದ್ದರು.

ಕಡು ಬಡವನಾಗಿರುವ ಜಿತು ಮುಂಡಗೆ ಮರಣ ಪತ್ರ ಪಡೆದುಕೊಳ್ಳುವುದು ಕಷ್ಟಕರವಾಗಿದ್ದ ಕಾರಣ ಆತ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ತೆಗೆದು ಬ್ಯಾಂಕ್‌ಗೆ ತಂದಿದ್ದಾನೆ. ಬ್ಯಾಂಕ್‌ನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದ್ದ ಸಮಾಧಿಯಿಂದ ಸಹೋದರಿಯ ಹೆಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಮುಚ್ಚಿ ಹೆಗಲೆ ಮೇಲೆ ಹೊತ್ತುತಂದಿದ್ದಾನೆ.

ಈ ದೃಶ್ಯ ಕಂಡು ರಸ್ತೆಯಲ್ಲಿದ್ದವರು ವಿಡಿಯೊ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ 19300 ರೂ ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ಬ್ಯಾಂಕ್‌ಗೆ ಹೊತ್ತು ತುರುತ್ತಾನೆ ಎಂದರೆ ದೇಶದ ಬಡತನ ಎಷ್ಟರ ಮಟ್ಟದಲ್ಲಿದೆ ಎಂದು ಚರ್ಚೆಗಳು ನಡೆದಿವೆ.

You may also like

Leave a Comment