Tuesday, June 9, 2026
Home ಆರೋಗ್ಯಮೆಡಿಕವರ್ ಆಸ್ಪತ್ರೆಯ ನೂತನ ಮಹಿಳಾ ಮತ್ತು ಮಕ್ಕಳ ಘಟಕವನ್ನ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ.

ಮೆಡಿಕವರ್ ಆಸ್ಪತ್ರೆಯ ನೂತನ ಮಹಿಳಾ ಮತ್ತು ಮಕ್ಕಳ ಘಟಕವನ್ನ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ.

by Dharmaraju
0 comments

ಬೆಂಗಳೂರು (ವೈಟ್ ಫೀಲ್ಡ್): ತಾಯಂದಿರ ದಿನಾಚರಣೆಯಂದು ವೈಟ್ ಫೀಲ್ಡ್ ನ ಹೂಡಿಯ ಮೆಡಿಕವರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ ಮಹಿಳಾ ಮತ್ತು ಮಕ್ಕಳ 100 ಹಾಸಿಗೆಗಳ ಘಟಕವನ್ನ ಖ್ಯಾತ ನಟಿ ರುಕ್ಮಿಣಿ ವಸಂತ ಉದ್ಘಾಟಿಸಿದರು.

ಗರ್ಭಧಾರಣೆ, ನವಜಾತ ಶಿಶುವಿನ ತೀವ್ರ ನಿಗಾ ಘಟಕ, ಮಕ್ಕಳ ತುರ್ತು ಚಿಕಿತ್ಸೆ ಸೇವೆ ಒದಗಿಸಲಾಗುತ್ತದೆ. ಲೆವೆಲ್-3 ಎನ್‌ಐಸಿಯು, ಪಿಐಸಿಯು, ಮೆಟರ್ನಲ್ ಐಸಿಯು, ರೊಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ 24×7 ಮಕ್ಕಳ ತುರ್ತು ಚಿಕಿತ್ಸಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ.

ತಾಯಿ-ಮಗು ಆರೋಗ್ಯ ಸೇವೆಗಳಿಗೆ ಸಮಗ್ರ ಮತ್ತು ಉನ್ನತ ಮಟ್ಟದ ಚಿಕಿತ್ಸಾ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ.

ಆಸ್ಪತ್ರೆ ಉದ್ಘಾಟನೆಯ ಹಿನ್ನಲೆ ತಾಯಂದಿರಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ಸೀಮಿತ ಉದ್ಘಾಟನಾ ಕೊಡುಗೆಯ ಭಾಗವಾಗಿ, ಮೊದಲ 100 ನೋಂದಣಿದಾರರು ಸಾಮಾನ್ಯ ಹೆರಿಗೆಗೆ ₹45,000 ಮತ್ತು  ಕ್ಕೆ ಸಿ-ಸೆಕ್ಷನ್ ಗೆ ₹65,000 ಪ್ಯಾಕೇಜ್‌ಗಳನ್ನು ಪಡೆಯಬಹುದು. ತಜ್ಞ ಪ್ರಸೂತಿ ಆರೈಕೆ, ಸುಧಾರಿತ ಸೌಲಭ್ಯಗಳು, ನವಜಾತ ಶಿಶುಗಳ ಬೆಂಬಲ ಮತ್ತು ಸಹಾನುಭೂತಿಯ ಆರೈಕೆ ಸೇವೆಗಳೊಂದಿಗೆ ವಿಶೇಷ ಕೊಡುಗೆಗಳನ್ನ ನೀಡಿದೆ.

ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ನಟಿ ರುಕ್ಮಿಣಿ ವಸಂತ, ತಾಯಿಯ ಪ್ರೀತಿ ಪ್ರತಿಯೊಂದು ಮನೆಯ ಹೃದಯ ಬಡಿತದಂತಿದೆ. ಆ ಹೃದಯವನ್ನು ಕಾಪಾಡುವ ಈ ರೀತಿಯ ಆಸ್ಪತ್ರೆಯನ್ನು ತಾಯಂದಿರ ದಿನದಂದು ನಮ್ಮ ನಗರದಲ್ಲಿ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ ಅನೀಲ್ ಕೃಷ್ಣ, . ತಾಯಂದಿರು ಮತ್ತು ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪುಗೊಂಡ ಆಸ್ಪತ್ರೆಯನ್ನು ನಗರಕ್ಕೆ ನೀಡುತ್ತಿರುವುದು ಸಂತೋಷದ ವಿಷಯ. ಗುಣಮಟ್ಟ, ಸುಲಭ ಲಭ್ಯತೆ ಮತ್ತು ವಿಶ್ವಾಸಾರ್ಹ ಚಿಕಿತ್ಸಾ ಫಲಿತಾಂಶಗಳಿಗೆ ನಾವು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಪಿ ಹರಿಕೃಷ್ಣ ಮಾತನಾಡಿ, ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿಶೇಷ ಆರೋಗ್ಯ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ಆಸ್ಪತ್ರೆ ಆ ಪ್ರದೇಶದ ಜನರಿಗೆ ದೀರ್ಘಕಾಲಿಕ ಆರೋಗ್ಯ ಸೇವಾ ಬದ್ಧತೆಯಾಗಿದೆ ಎಂದರು.

ಉದ್ಘಾಟನೆಯ ಅಂಗವಾಗಿ ಬೆಂಗಳೂರಿನ ತಾಯಂದಿರು ಬರೆದ ನೂರು ಹಸ್ತಲಿಖಿತ ಶುಭಾಶಯ ಸಂದೇಶಗಳನ್ನು ಒಳಗೊಂಡ ‘ವಾಲ್ ಆಫ್ ವಿಶಸ್’ ಅನಾವರಣಗೊಳಿಸಲಾಯಿತು. ರುಕ್ಮಿಣಿ ವಸಂತ ಅವರು 101ನೇ ಸಂದೇಶವನ್ನು ಸೇರಿಸಿದರು.

ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಡಾ.ಪ್ರವೀಣ್ ವೆಂಕಟಗಿರಿ, ಡಾ.ಲತೀಶ್ ಕಂಬಂ, ಡಾ.ಶಿವಶಂಕರ ಡಿಗ್ಗಿಕರ್, ಡಾ.ತೇಜಿ ದಾವಣೆ ಹಾಗೂ ಡಾ.ವೇಣುಗೋಪಾಲ್ ರೆಡ್ಡಿ ನೇತೃತ್ವ ವಹಿಸಿದ್ದಾರೆ.

You may also like

Leave a Comment