ದೊಡ್ಡಬಳ್ಳಾಪುರ: ಬೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಪರಿಹಾರ ಹಾಗೂ ಸುರಕ್ಷತಾ ಜಾಗೃತಿ ಸಭೆ ಮೇ 16 ರಂದು ನಡೆಯಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನಯ್‌ಕುಮಾರ್ ತಿಳಿಸಿದ್ದಾರೆ.
ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಎಪಿಎಂಸಿ ಸಮೀಪದ ಬೆಸ್ಕಾಂ ದೊಡ್ಡಬಳ್ಳಾಪುರ ನಗರ ಉಪವಿಭಾಗ ಕಚೇರಿಯಲ್ಲಿ ಸಭೆ ನಡೆಯಲಿದ್ದ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎದುರಾಗುತ್ತಿರುವ ಸಮಸ್ಯೆಗಳು, ನ್ಯೂನ್ಯತೆಗಳು, ಸಲಹೆ, ಅಭಿಪ್ರಾಯಗಳನ್ನು ಪರಸ್ಪರ ಚರ್ಚಿಸಿ ಸ್ನೇಹ ಪೂರ್ವಕವಾಗಿ ಪರಿಹರಿಸಲಾಗುವುದು. ನಗರ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಬಾಶೆಟ್ಟಿಹಳ್ಳಿ, ಮೆಳೇಕೋಟೆ ಕ್ರಾಸ್ ಶಾಖೆಗಳ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.