180
ದೊಡ್ಡಬಳ್ಳಾಪುರ; ನಗರದಾದ್ಯಂತ ಹೆಸರುವಾಸಿಯಾಗಿದ್ದ ದಲಿತಪರ, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಡಿ.ವಿ ಅಶ್ವತ್ಥಪ್ಪ ಅವರು ಇಂದು ಸಂಜೆ 6ಗಂಟೆ ಸುಮಾರಿಗೆ ದೈವಾದೀನರಾಗಿದ್ದಾರೆ.
ಮೃತರಿಗೆ 67ವರ್ಷ ವಯಸ್ಸಾಗಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯೂ ಭಾನುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದಲ್ಲಿರುವ ಸ್ಮಶಾಣದಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿದೆ. ಇವರ ಅಗಲಿಕೆಗೆ ಗಣ್ಯರು, ರಾಜಕಾರಣಿಗಳು, ಕಚೇರಿಪಾಳ್ಯದ ವಾಸಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.