Tuesday, June 9, 2026
Home ಬೆಂಗಳೂರು ನಗರಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

by Dharmaraju
0 comments

ಕೆ.ಆರ್.ಪುರ: ಬಡಮಕ್ಕಳ ಶಿಕ್ಷಣಕ್ಕೆ ಪ್ರತಿಭಾ ಪುರಸ್ಕಾರದ ಮೂಲಕ ಆರ್ಥಿಕ ಸಹಾಯ ಮಾಡುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.

ಕೆ.ಆರ್.ಪುರ ಹಾಗೂ ಆನಂದ ಪುರ ವಾರ್ಡನ ಪ್ರತಿಭಾನ್ವಿತ ಮಕ್ಕಳಿಗೆ ಸಮಾಜ ಸೇವಕ ಕೆ.ಹೆಂಮತ್( ಚಿನ್ನಿ) ಅವರ ತಾಯಿ ಸರಸ್ವತಮ್ಮ ಅವರ 65ನೇ‌ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅಗತ್ಯ ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ನೀಡುವ ಮೂಲಕ ಮುಂದಿನ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.

ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜಕ್ಕೆ ಸೇವೆ ಮಾಡುತ್ತಿರುವ ಹೆಂಮತ್ ಕಾರ್ಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಆಯೋಜಕ ಕೆ.ಹೆಂಮತ್ ಅವರು ಮಾತನಾಡಿ ನನ್ನ ತಾಯಿ ಸರಸ್ವತಮ್ಮ ಅವರ ಹುಟ್ಟುಹಬ್ಬ ವನ್ನು ಜನೋಪಕಾರಿ ಆಚರಣೆ ಮಾಡುವ ಉದ್ದೇಶದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ಅಂತೆ 82 ಮಕ್ಕಳಿಗೆ ವಿತರಣೆ ಮಾಡಲಾಗಿದೆ,ಸರ್ಕಾರಿ ಶಾಲೆಯ ಮಕ್ಕಳಿಗೆ 600 ಬ್ಯಾಗ್ ನೋಟ್ ಪುಸ್ತಕ ಹಾಗೂ 7ನೇ ತರಗತಿ ಮಕ್ಕಳಿಗೂ ಪ್ರತಿಭಾಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಕೆ.ಆರ್.ಪುರ ಸುತ್ತ ಮುತ್ತ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲೆ ಆರಂಭವಾದ ಬಳಿಕ 1 ಸಾವಿರ ಬ್ಯಾಗ್ ಗಳನ್ನ ನೀಡಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನ್ಯೂಬಾಲ್ಡ್ ವಿನ್ ಶಾಲೆಯ ಅಧ್ಯಕ್ಷ ವೇಣುಗೋಪಾಲ, ಬ್ರಹ್ಮನ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ,ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ,ಎಸ್.ಜಿ.ನಾಗರಾಜ್, ಎಸ್.ಎಸ್.ಪ್ರಸಾದ್,ಮಂಜುಳಾದೇವಿ ಮುಖಂಡರಾದ ಮೋಹನ್,ಗೌರಮ್ಮ, ಶ್ರೀರಾಮುಲು,ಉಮಾಶಂಕರ್,ಶಿವಪ್ಪ,ಗಿರೀಶ್ ಬಾಬು,ಜಗದೀಶ್ ಇದ್ದರು.

You may also like

Leave a Comment