ದೊಡ್ಡಬಳ್ಳಾಪುರ; ನಗರದ ಕಾಂಗ್ರೆಸ್ ಮುಖಂಡರಾದ ಟಿ. ಮಂಜುನಾಥ್ ರವರ 46ನೇ ಜನ್ಮದಿನದ ಹಿನ್ನೆಲೆ ಶುಕ್ರವಾರ ಗೆಳೆಯರ ಬಳಗದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಂಜುನಾಥ್ ರವರು 46 ವರ್ಷ ಪೂರೈಸಿದ ಹಿನ್ನೆಲೆ ಅವರ ಸಮಾಜಮುಖಿ ಕಾರ್ಯಕ್ರಮಗಳ ಮೆಚ್ಚಿ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಅನ್ನಸಂತರ್ಪಣೆ ಮಾಡಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಗೆಳೆಯರ ಬಳಗದ ತಂಡವು ಮಂಜುನಾಥ್ ರವರು ಕಚೇರಿಪಾಳ್ಯ ವಾರ್ಡ್ ಗೆ ಈಗಾಗಲೇ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ಅನೇಕ ಮಂದಿಗೆ ಪ್ರೇರಣೆಯಾಗಿದೆ. ಮುಂದೆ ವಾರ್ಡ್ ನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

ಈ ವೇಳೆ ಗಂಗಾಧರ್, ಆದಪ್ಪ, ಮಂಜುನಾಥ್, ಶ್ರೀನಿವಾಸ್, ರವಿ, ಅನಂತ್, ಕುಮಾರ್, ತಮ್ಮಯ್ಯ, ನಂದೀಶ್, ನಾಗಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.