Tuesday, June 9, 2026
Home ದೇಶ/ವಿದೇಶಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

by Dharmaraju
0 comments

ಅಮೆರಿಕದ ಜಾರ್ಜಿಯಾದಲ್ಲಿ, ಕೇರಳ ಮೂಲದ ನವದಂಪತಿ ಜೆಸ್ನಿ ಮತ್ತು ಡೇವ್ ಫಿಜಿ ಅವರ ವಿವಾಹದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಮಳೆ ಮತ್ತು ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟ‌ರ್ ಪತನಗೊಂಡ ಪರಿಣಾಮ 25 ವರ್ಷದ ವರ ಡೇವ್ ಫಿಜಿ ಮತ್ತು ಹೆಲಿಕಾಪ್ಟ‌ರ್ ಪೈಲಟ್ ಮೃತಪಟ್ಟಿದ್ದಾರೆ.

ತೀವ್ರ ಗಾಯಗಳಾಗಿದ್ದರೂ, ನವವಧು ಜೆಸ್ನಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಅವರನ್ನು ಹೊರತೆಗೆಯಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.
ದಟ್ಟವಾದ ಕಾಡಿನ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಅವಶೇಷಗಳು ಮತ್ತು ಬಿದ್ದ ಮರಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ನವವಧು ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಆಫ್‌‍-ರೋಡ್‌ ವಾಹನಗಳ ಸಹಾಯದಿಂದ ಅತ್ಯಂತ ಶ್ರಮಪಟ್ಟು ಹೊರತೆಗೆದಿದ್ದಾರೆ.

ವೃತ್ತಿಯಲ್ಲಿ ನರ್ಸ್‌ ಆಗಿರುವ ಜೆಸ್ನಿಗೆ ದೇಹದಾದ್ಯಂತ ತೀವ್ರ ಗಾಯಗಳಾಗಿದ್ದರೂ, ಯಾವುದೇ ಮೂಳೆ ಮುರಿತ ಸಂಭವಿಸದೆ ಬದುಕುಳಿದಿರುವುದು ವೈದ್ಯಕೀಯ ಪವಾಡವೇ ಸರಿ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತನಿಖೆ ಆರಂಭ ನಾಲ್ಕು ದಶಕಗಳಿಂದ ಅತ್ಯುತ್ತಮ ಸುರಕ್ಷತಾ ದಾಖಲೆ ಹೊಂದಿದ್ದ ಪ್ರೆಸ್ಟೀಜ್‌ ಹೆಲಿಕಾಪ್ಟರ್ಸ್‌ ಸಂಸ್ಥೆಗೆ ಸೇರಿದ ರಾಬಿನ್ಸನ್‌ 66 ಹೆಲಿಕಾಪ್ಟರ್‌ ಇದಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ಆರಂಭಿಸಿದೆ. ಇನ್ನು 30 ದಿನಗಳಲ್ಲಿ ಇದರ ಪ್ರಾಥಮಿಕ ವರದಿ ಹೊರಬರಲಿದೆ.

ಈ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಡೆಲ್ಟಾ ಏರ್‌ಲೈನ್ಸ್ ನಲ್ಲಿ ಪೈಲಟ್‌ ಆಗಿದ್ದ ಡೇವ್‌ ಫಿಜಿ ಮೃತಪಟ್ಟಿದ್ದರೆ, ನವವಧು ಜೆಸ್ನಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.

You may also like

Leave a Comment