Saturday, July 11, 2026
Home ಅಪರಾಧ ಸುದ್ದಿದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

ದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

by Raghavendra H A
0 comments

ದೊಡ್ಡಬಳ್ಳಾಪುರ; ತಾಲ್ಲೂಕು ತೊಗರೀಘಟ್ಟ ಗ್ರಾಮದಲ್ಲಿನ ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಧಾರುಣ ಘಟನೆ ಇಂದು ನಡೆದಿದೆ.

ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಸವಿತಾ ಮತ್ತು ಮುನಿರಾಜು ದಂಪತಿಯ ಮಗಳು 11ವರ್ಷದ ದಕ್ಷ, ಹಾಗೂ ಆಶಾ ಮತ್ತು ಪ್ರದೀಪ್ ದಂಪತಿಯ ಮಗ 4 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ಗುರುಮೂರ್ತಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೋಂಡದಲ್ಲಿ ಈ ಘಟನೆ ನಡೆದಿದೆ.

ಕೃಷಿ ಹೊಂಡಕ್ಕೆ ಸರಿಯಾಗಿ ಭದ್ರತೆ ಮಾಡದೆ ಇಬ್ಬರು ಮಕ್ಕಳ ಸಾವಿಗೆ ಕಾರಣರಾದ ಗುರುಮೂರ್ತಿ ವಿರುದ್ಧ 106 BNS ರೀತಿಯ ಪ್ರಕರಣ ದಾಖಲಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಡಾ.ಎಂ.ಬಿ ನವೀನ್ ಕುಮಾರ್ ರವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment