ಹೊಸಕೋಟೆ :- ಅತಿ ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ನಗರದ ಅರೆಬಿಕ್ ಕಾಲೇಜು ಸಮೀಪದ ಪಿಎನ್‌ಟಿ ಕಾಲೋನಿ ನಿವಾಸಿ ಸಾಜೀಯಾ (28) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಕಮ್ಮನಹಳ್ಳಿಯ ನಿವಾಸಿ ರಿಜ್ವಾನ್ (34) ಮೃತಪಟ್ಟವರು.
ರಿಜ್ವಾನ್ ತನ್ನ ಬೆಂಜ್ ಕಾರಿನಲ್ಲಿ ಸ್ನೇಹಿತೆ ಸಾಜೀಯ ಅವರನ್ನು
ಕರೆದುಕೊಂಡು ಹೋಟೆಲ್‌ನಲ್ಲಿ ಊಟ ಮಾಡಲು ದೇವನಹಳ್ಳಿ ಕಡೆಗೆ ರಾತ್ರಿ ಹೋಗಿದ್ದಾರೆ.
ಊಟ ಮುಗಿಸಿಕೊಂಡು ವಾಪಸ್ ತಡರಾತ್ರಿ 12.45 ರ ಸುಮಾರಿನಲ್ಲಿ ನಗರಕ್ಕೆ ಬರುತ್ತಿದ್ದಾಗ ಹೊಸಕೋಟೆ ಸಮೀಪದ ದೊಡ್ಡ ಹುಲ್ಲೂರು ಬಳಿಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಅಪ್ಪಳಿಸಿದೆ.
ಪರಿಣಾಮ ಕಾರಿನೊಳಗಿದ್ದ ಸ್ನೇಹಿತೆ ಸಾಜೀಯಾ ಎಂಬುವವರು ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರಿಜ್ವಾನ್ ಸೇತುವೆಯಿಂದ 20ಕೈಗೊಂಡಿದ್ದಾರೆ
ಬಿದ್ದಿದ್ದಾನೆ.
ಕೆಳಗೆ ನೀರು ಇದ್ದುದ್ದರಿಂದ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ರಿಜ್ವಾನ್ ಶವ ಪತ್ತೆಯಾಗಿದೆ.
ಸುದ್ದಿ ತಿಳಿದು ಹೊಸಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಅತಿ ವೇಗ ಹಾಗೂ ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಅಪಘಾತದ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರಿದಿದೆ.