ಮರಕ್ಕೆ ಕಾರು ಡಿಕ್ಕಿ, ಮಾರುಕಟ್ಟೆ ಮುಖ್ಯಶಿಕ್ಷರ ಸ್ಥಳದಲ್ಲೆ ಸಾವು

ಸ್ಥಳೀಯ ಸುದ್ದಿಕ್ರೈಮ್

RAGHAVENDRA H A

1/3/20261 min read

ದೊಡ್ಡಬಳ್ಳಾಪುರ : ನಗರದ ಮಾರುಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಕಾರಿನಲ್ಲಿ ಶಾಲೆಗೆ ಬರುವಾಗ ಮಾರ್ಗಮಧ್ಯೆ ಕಾರು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಕಾಡನೂರು ಕ್ರಾಸ್ ಬಳಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ, ಘಟನೆಯಲ್ಲಿ ಮುಖ್ಯ ಶಿಕ್ಷಕರಾದ ಜಗದೀಶಯ್ಯ (57) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮೃತರು ತಾಲೂಕಿನ ಪುರುಷನಹಳ್ಳಿ ಮೂಲದವರು, ಸದ್ಯ ನೆಲಮಂಗದಲದಲ್ಲಿ ವಾಸವಾಗಿದ್ದರು. ದೊಡ್ಡಬಳ್ಳಾಪುರ ನಗರದ ಮಾರ್ಕೆಟ್ ಶಾಲೆಯ ಮುಖ್ಯೋಪಾಧ್ಯರಾಗಿ ಕೆಲಸ ಮಾಡುತ್ತಿದ್ದರು.

ಇಂದು ಶನಿವಾರವಾಗಿದ್ದರಿಂದ ಮುಂಜಾನೆಯ ಶಾಲೆಗೆ ಬರಲು ಕಾರಿನಲ್ಲಿ ಬರುತ್ತಿದ್ದರು ವೇಳೆ ಕಾರು ಮರಕ್ಕೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.