ಬಾಗಲಕೋಟೆ: ಪಶು ಆಸ್ಪತ್ರೆಗೆ ತಾನಾಗಿಯೇ ಬಂದು ಡಾಕ್ಟರ ಬಳಿ ಚಿಕಿತ್ಸೆ ಪಡೆದ ಮಂಗ!

ಜಿಲ್ಲಾ ಸುದ್ದಿ

ಧರ್ಮ ಬಸವನಪುರ

5/23/20251 min read

ಬಾಗಲಕೋಟೆ:ಗುದದ್ವಾರದಲ್ಲಿ ನೋವಿದೆ ಎಂದು ಇಲ್ಲೊಂದು ಕೋತಿ ತಾನಾಗಿಯೇ ಪಶು ಆಸ್ಪತ್ರೆಗೆ ಹೋಗಿ, ನೋವಿಗೆ ಚಿಕಿತ್ಸೆ ಪಡೆದುಕೊಂಡಿರುವ ಅಚ್ಚರಿ ಘಟನೆ ನಡೆದಿದೆ.

ಗುದದ್ವಾರದಲ್ಲಿನ ನೋವು ಸಹಿಸಲಾರದೇ ಮಂಗವೊಂದು ತಾನಾಗೆ ಪಶು ಆಸ್ಪತ್ರೆಗೆ ಆಗಮಿಸಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ.

ಗೂಡೂರಿನ ಪಶು ಆಸ್ಪತ್ರೆಗೆ ಹೋದ ಮಂಗ, ಪಶು ವೈದ್ಯರ ಬಳಿ ತೆರಳಿ ತನ್ನ ಗುದದ್ವಾರದ ಕಡೆ ಕೈ ತೋರಿಸಿ, ಸಮಸ್ಯೆಯನ್ನು ತಿಳಿಸಿದೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯ ಜಿ.ಜಿ. ಬಿಲ್ಲೋರ ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಚಿಕಿತ್ಸೆ ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಗಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. ಅಲ್ಲದೇ ಕೋತಿಯ ನೋವನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.