ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ

ಸ್ಥಳೀಯ ಸುದ್ದಿ

Raghavendra H A

6/14/20251 min read

ದೊಡ್ಡಬಳ್ಳಾಪುರ: ನಗರದ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ ಫೀಡರ್‌ಗಳಲ್ಲಿ ಹೆಚ್ಚುವರಿ ಮಾರ್ಗದ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಸದರಿ ಮಾರ್ಗದಲ್ಲಿ ನಾಳೆ (ಜೂನ್.19) ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಗಾಧರಪುರ, ಪಾಲನಜೋಗಿಹಳ್ಳಿ, ಹಾಲಿನಡೈರಿ ಸುತ್ತಮುತ್ತಲು, ಆರ್.ಎಮ್.ಸಿ ಮಾರ್ಕೆಟ್, ಟಿ.ಬಿ.ಸರ್ಕಲ್, ಮಾದಗೊಂಡನಹಳ್ಳಿ ರಸ್ತೆಯ ರಾಜೀವ್ ಗಾಂಧೀ ಕಾಲೋನಿ, ಚಂದ್ರಮೌಳೇಶ್ವರ ಬಡಾವಣೆ, ಸುಭಾಷ್ ನಗರ, ಕುವೆಂಪು ನಗರ, ಬಸೆವೇಶ್ವರನಗರ, ಪ್ರಿಯಾದರ್ಶಿನಿ ಬಡಾವಣೆ, ಹಸನ್‌ಘಟ್ಟಾ, ಕಂಟನಕುಂಟೆ, ಅಂತರಹಳ್ಳಿ, ತಪಸೀಹಳ್ಳಿ, ಆಳ್ಳಾಲಸಂದ್ರ, ಬಚ್ಚಹಳ್ಳಿ, ಗೊಲ್ಲಹಳ್ಳಿ, ಗೊಲ್ಲಹಳ್ಳಿ,ತಾಂಡ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ಕಮಲೂರು, ಕಮಲೂರು ಪಾಳ್ಯ, ನೆಲ್ಲುಕುಂಟೆ, ಕರೇನಹಳ್ಳಿ, ಹೊಸಹಳ್ಳಿ, ನಾಗಶೆಟ್ಟಿಹಳ್ಳಿ, ಚೊಕ್ಕನಹಳ್ಳಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.