ಛಲವಾದಿ ಭವನದಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ
ರಾಜ್ಯ


ಬೆಂಗಳೂರು: ಸುಕ್ಷೇತ್ರ ಕೋಡ್ಲಾ ಶ್ರೀ ಉರಿಲಿಂಗ ಪೆದ್ದೇಶ್ವರ ಮಹಾಸಂಸ್ಥಾನ ಮಠದ ಶ್ರೀಶ್ರೀಶ್ರೀ ಪ.ಪೂ. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ, ಹಾಗೂ ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಮಠದ ಸ್ವಾಮೀಜಿಯವರಾದ ಶ್ರೀಶ್ರೀಶ್ರೀ ಬಸವನಾಗಿದೇವ ಶರಣರು ರವರ ದಿವ್ಯ ನೇತೃತ್ವದಲ್ಲಿ ಮಹಾ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಇಂದು ಹಮ್ಮಿಕೊಳ್ಳಲಾಗಿದೆ.
ನಗರದ ಸರ್.ಎಂ ವಿಶ್ವೇಶ್ವರಯ್ಯ ಲೇಔಟ್, ದೊಡ್ಡಬಸ್ತಿ ಯಲ್ಲಿರುವ ಛಲವಾದಿ ಭವನದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಎಲ್ಲಾ ನಿರ್ದೇಶಕರುಗಳು, ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರುಗಳು, ಹೋಬಳಿ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು ಹಾಗೂ ಛಲವಾದಿ ಸದಸ್ಯ ಬಂಧುಗಳು ತಪ್ಪದೆ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ. ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕಾಗಿ ದಲಿತ ಮುಖಂಡರಾದ ಗುರುರಾಜ್ ಅವರು ಮನವಿ ಮಾಡಿಕೊಂಡಿದ್ದಾರೆ.