ನಾಗಮೋಹನ್ ದಾಸ್ ವರದಿ ಅಂಗೀಕಾರಕ್ಕೆ ಆಗ್ರಹ
ಸ್ಥಳೀಯ ಸುದ್ದಿ


ಮಹದೇವಪುರ: ಒಳ ಮೀಸಲಾತಿ ಜಾರಿ ಮಾಡದೆ ಮೀನಮೇಷ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಹಾಗೂ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಆಗಸ್ಟ್ 16ರ ವಿಶೇಷ ಸಚಿವ ಸಂಪಟದ ಸಭೆಯಲ್ಲಿ ಸರ್ಕಾರ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಎಸ್.ಸಿ. ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹೂಡಿ ಎಚ್.ವಿ ಮಂಜುನಾಥ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಹೂಡಿಯ ಖಾಸಗಿ ಹೋಟಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಕರ್ನಾಟಕದಲ್ಲಿ ಇರುವ ಮಾದಿಗರ ಹಿತಕ್ಕಾಗಿ ಒಳ ಮೀಸಲಾತಿ ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಅವರು ಚುನಾವಣೆಗಳಲ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ. ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ, ಈ ವರದಿಯನ್ನು ಜಾರಿ ಮಾಡುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಯನ್ನು ಜಾರಿಗೊಳಿಸಲು ನೀಡಿರುವ ಆದೇಶವನ್ನು ಜಾರಿ ಮಾಡಲು ಒಂದು ವರ್ಷ ಕಳೆದಿದೆ ಎಂದು ದೂರಿದರು.
ಕಾಂತರಾಜ ಆಯೋಗದ ವರದಿ ಯಂತೆ ನಾಗಮೋಹನ್ ದಾಸ್ ವರದಿ ಯನ್ನೂ ಜಾರಿಗೊಳಿಸದೆ ಕಾಲಹರಣ ಮಾಡಬಾರದು. ಆದಷ್ಟು ಬೇಗ ವರದಿ ಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಸಿದರು.
ವಕೀಲರಾದ ವಿ. ವಿಕ್ರಮ್ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗ, ಆರು ಶಿಫಾರಸುಗಳನ್ನೂ ಮಾಡಿದೆ. ಇದನ್ನು ಅನುಸರಿಸಿ ಮಾದಿಗ ಜನಾಂಗದವರಿಗೆ ನ್ಯಾಯ ಸಿಗುವಂತೆ ಮಾಡಬೇಕು, ನಾವು ಇಟ್ಟಿಕೊಂಡಿದ ನಿರೀಕ್ಷೆ ಇಂದು ಸುಳ್ಳಾಗಿದೆ. ಮುಂದಿನ ಸಂಪುಟದಲ್ಲಿ ನ್ಯಾಯಸಿಗವಂತಾಗಲ್ಲಿ ಎಂದರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ, ಕನ್ನೆಲಿ ಕೆ. ಎಂ.ಸುರೇಶ್, ರಾಜಶೇಖರ್, ವಕೀಲರಾದ ಸಂಜಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.