ಬೆಟ್ಟಕೋಟೆ ಪಿಡಿಒ ಕೆಂಪರಾಜಯ್ಯ ಅಮಾನತು
ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ


ದೇವನಹಳ್ಳಿ: ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಯಸಂದ್ರ ಗ್ರಾಮದಲ್ಲಿ ಒಂದೇ ಕಾಮಗಾರಿಗೆ ಎರಡು ಕಡೆ ಬಿಲ್ ಪಾವತಿಸಿರುವ ಬಗ್ಗೆ ಸುದ್ದಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಅನುದಾನ ಲೆಕ್ಕಶೀರ್ಷಿಕೆ 5054ರಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸಿ ಪೂರ್ಣಗೊಂಡ ಕಾಮಗಾರಿಗೆ ಮತ್ತೊಮ್ಮೆ ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲ ನಿಧಿಯಡಿ ರೂ.4.99ಲಕ್ಷಗಳ ಅಂದಾಜು ಮೊತ್ತದಲ್ಲಿ ರಾಯಸಂದ್ರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಶ್ರೀ ಮುನಿಕೃಷ್ಣಪ್ಪ ತೋಟದಿಂದ ಪರಿಶಿಷ್ಟ ಪಂಗಡ ಮುನಿರಾಜು ತೋಟದವರೆಗೆ ರಸ್ತೆ ಮತ್ತು ಮೋರಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಬಿಲ್ಲು ಮತ್ತು ದಾಖಲೆಗಳನ್ನು ಸೃಜಿಸಿಕೊಂಡು ಬಿಲ್ಲು ಪಾವತಿಸಿರುವ ಹಿನ್ನೆಲೆಯಲ್ಲಿ ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಕೆಂಪರಾಜಯ್ಯ ರವರನ್ನು ದಿನಾಂಕ:19-11-2025ರಂದು ಅಮಾನತ್ತುಗೊಳಿಸಿ ಆದೇಶಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ ಹಾಗೂ ಇಲಾಖಾ ವಿಚಾರಣಾ ಕೈಗೊಳ್ಳಲು ಕ್ರಮಕೈಗೊಳ್ಳಲಾಗಿದೆ.
ಕಾಮಗಾರಿಯನ್ನು ನಿರ್ಮಾಣ ಮಾಡದೇ, ಅಕ್ರಮವಾಗಿ ಬಿಲ್ಲು ಪಾವತಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಿನಾಂಕ: 20-11-2025ರಂದು ಎಫ್.ಐ.ಆರ್. ದಾಖಲಿಸಲಾಗಿದೆ.