ಪತ್ರಿಕಾ ದಿನಾಚರಣೆ:ಸ್ಟೈಲ್ ಅಂಡ್ ಟ್ರೆಂಡ್ಜ್ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ಸ್ಥಳೀಯ ಸುದ್ದಿ


ಮಹದೇವಪುರ: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ. ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿಯಾಗಿ ಇರುವ ಅಗತ್ಯ ಇದೆ ಎಂದು ಸಮಾಜಸೇವಕಿ ತೃಪ್ತಿ ರವಿ ರೆಡ್ಡಿ ತಿಳಿಸಿದರು.
ಕ್ಷೇತ್ರದ ಬೆಳ್ಳಂದೂರು ರಸಗಂಗ ಹೋಟೆಲ್ ನಲ್ಲಿ ಸ್ಟೈಲ್ ಅಂಡ್ ಟ್ರೆಂಡ್ಜ್ ಹಮ್ಮಿಕೊಂಡಿದ ಕ್ಷೇತ್ರದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಸನ್ಮಾನ, ಸಾರ್ವಜನಿಕರಿಗೆ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಸಂಚಾರ ನಿಯಮ ಅರಿವು ಮೂಡಿಸು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ನಿವೃತ್ತ ಪೋಲಿಸ್ ಅಧಿಕಾರಿ ದೇವರಾಜ್ ಮಾತನಾಡಿ, ಧೈರ್ಯ ಮತ್ತು ಸತ್ಯಕ್ಕೆ ನಿಷ್ಠರಾಗಿ ನಡೆಯುವುದು ಪತ್ರಿಕಾ ರಂಗಕ್ಕೆ ಪ್ರವೇಶಿಸುವವರು ಮೈಗೂಡಿಸಿಕೊಳ್ಳಬೇಕಾದ ಗುಣಗಳು. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಸಂಚಾರ ನಿಮಯ ಪಾಲಿಸಿ ಜೀವ ರಕ್ಷಿಸಿಕೊಳ್ಳಿ, ಪತ್ರಕರ್ತರಿಗೆ ಅಭದ್ರತೆ ಭಾವನೆ ಮೂಡಿದರೆ ಅವರಿಂದ ಸಮರ್ಪಕ ಕೆಲಸ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು.
ಇದೇವೇಳೆ ಪೂ.ತಾ. ಪತ್ರಕರ್ತರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು. ಎಚ್.ಎ.ಎಲ್ ಹಾಗೂ ಎಚ್.ಎಸ್.ಆರ್ ಲೇಔಟ್ ನ ಸಂಚಾರಿ ವಿಭಾಗದ ಅಧಿಕಾರಿಗಳಾದ ಹೇಮಾಲತಾ ಹಾಗೂ ನಾಗೇಂದ್ರ, ಪತ್ರಿಕೆ ಸಂಪಾದಕರಾದ ಮಹದೇವಗೌಡ, ಉಮೇಶ್, ನಸೀರ್ ಸೇರಿದಂತೆ ಮಿಡಿತ ಫೌಂಡೇಶನ್ ಸಂಸ್ಥೆ ಅಧ್ಯಕ್ಷ ಪರಿಸರ ಮಂಜು, ಸೌಮ್ಯ ಪವಾರ್, ಹೋಟೆಲ್ ನ ಮುಖ್ಯಸ್ಥ ಸದನಂದಶೆಟ್ಟಿ, ಪತ್ರಕರ್ತರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.