ಬೆಂಗಳೂರು: ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಓರ್ವ ಸಾವು, ಮೂವರಿಗೆ ಗಾಯ.

ರಾಜ್ಯ

ಧರ್ಮ ಬಸವನಪುರ

6/8/20251 min read

ಬೆಂಗಳೂರು: ಬಿಎಂಟಿಸಿ ಬಸ್ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಮೇಲ್ಸೇತುವೆ ಬಳಿ ಜರುಗಿದೆ.

ಮುಹಮ್ಮದ್ ಝಮೀರ್(40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಝಮೀರ್ ಅವರ ಪತ್ನಿ ಆಯಿಷಾ, ಮಕ್ಕಳಾದ ಅಲೀಜಾ, ಆಫಿಯಾಗೆ ಗಂಭೀರ ಗಾಯಗಳಾಗಿದ್ದು, ನಗರದ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ

ಆಯಿಷಾ ಅವರ ಕಾಲು ಮತ್ತು ಬಲಗೈಗೆ ಗಾಯವಾಗಿದೆ. ಒಂದೂವರೆ ವರ್ಷದ ಮಗು ಆಫಿಯಾ ಬ್ರೈನ್ ಮೂಳೆ ಕಟ್ ಆಗಿದೆ. ನಾಲ್ಕು ವರ್ಷದ ಬಾಲಕಿ ಅಲೀಜಾ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಳುಗಳಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಣ್ಣೂರು ಡಿಪೋ 10ಕ್ಕೆ ಸೇರಿದ KA-51 AJ 8655 ನಂಬರ್ ನ ಬಿಎಂಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಜಮೀರ್ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್ ಅವರ ಮೇಲೆ ಹರಿದಿದೆ.