ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿ: ಊಟದಲ್ಲಿ ವಿಷವಿಟ್ಟು ಕುಟುಂಬವನ್ನೇ ಮುಗಿಸಲು ಸ್ಕೆಚ್ ಹಾಕಿದ್ದ ಐನಾತಿ ಹೆಣ್ಣು.
ಜಿಲ್ಲಾ ಸುದ್ದಿರಾಜ್ಯ


ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಬೇರೆ ಗಂಡಸಿನ ಜೊತೆ ಸರಸ ಆಡಲು ಅಡ್ಡಿಯಾಗುತ್ತಿದ್ದ ತನ್ನ ಅತ್ತೆ-ಮಾವ, ಮಕ್ಕಳು, ಗಂಡನಿಗೆ ಅನ್ನದಲ್ಲಿ ವಿಷ ಹಾಕಿ ಮಹಿಳೆ ಕೊಲ್ಲಲು ಯತ್ನಿಸಿರುವ ಘಟನೆ ಜರುಗಿದೆ. ಪತಿ ದೂರು ಆಧರಿಸಿ ಖತರ್ನಾಕ್ ಲೇಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರಾ (33) ಬಂಧಿತ ಮಹಿಳೆ. ಊಟದಲ್ಲಿ ವಿಷ ಬೆರೆಸಿ ಪತಿ, ಮಕ್ಕಳು, ಅತ್ತೆ-ಮಾವ ಎಲ್ಲರನ್ನೂ ಕೊಲೆ ಮಾಡಲು ಯತ್ನಿಸಿದ್ದಳು. ಇದನ್ನು ತಿಳಿದ ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೈತ್ರಾ ಹಾಗೂ ಆಕೆಯ ಪ್ರಿಯಕರನ್ನು ಬಂಧಿಸಿದ್ದಾರೆ.
11 ವರ್ಷಗಳ ಹಿಂದೆ ಚೈತ್ರಾ ಗಜೇಂದ್ರ ಜೊತೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಬಳಿಕ ಆಕೆಗೆ ಪುನೀತ್ ಎಂಬಾತನ ಪರಿಚಯವಾಗಿದ್ದು, ಆತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಇದರ ಬಗ್ಗೆ ತಿಳಿದ ಗಜೇಂದ್ರ ವಿಚಾರವನ್ನು ಆಕೆಯ ತಂದೆ ತಾಯಿಗೆ ತಿಳಿಸಿದ್ದ. ನಂತರ ಇಬ್ಬರ ನಡುವೆ ರಾಜಿ ಪಂಚಾಯ್ತಿ ಮಾಡಲಾಗಿದ್ದು, ದಂಪತಿ ಚೆನ್ನಾಗಿಯೇ ಇದ್ದರು.
ಈ ಘಟನೆಯ ಬಳಿಕ ಚೈತ್ರಾಗೆ ಶಿವು ಎಂಬುವವನ ಪರಿಚಯವಾಗಿ ಮತ್ತೆ ಅನೈತಿಕ ಸಂಬಂಧದಲ್ಲಿದ್ದಳು. ಈ ವಿಚಾರವೂ ಮನೆಯಲ್ಲಿ ಗೊತ್ತಾಗುತ್ತದೆ ಎಂದು ಭಾವಿಸಿ ಆಕೆ ಪ್ರಿಯಕರನೊಂದಿಗೆ ಸೇರಿ ಊಟದಲ್ಲಿ ವಿಷ ಬೆರೆಸಿ ಇಡೀ ಕುಟುಂಬವನ್ನು ಮುಗಿಸಲು ಪ್ರಯತ್ನಿಸಿದ್ದಳು. ತಕ್ಷಣ ಈ ವಿಚಾರ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಚೈತ್ರಾ ಹಾಗೂ ಆಕೆಯ ಪ್ರಿಯಕರ ಶಿವುನನ್ನು ಪೊಲೀಸರು ಬಂಧಿಸಿದ್ದಾರೆ.