ಮತ್ತೆ ಶುರುವಾದ ಹೆಮ್ಮಾರಿ ಕೊರೊನ.ಕರ್ನಾಟಕ ಸೇರಿದಂತೆ ದೇಶದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು.
ಸ್ಥಳೀಯ ಸುದ್ದಿದೇಶ/ವಿದೇಶ


ಬೆಂಗಳೂರು: ಕರ್ನಾಟಕದಲ್ಲಿ ಸಾವಿನ ರಣಕೇಕೆ ಹಾಕಿ ಸಾವಿರಾರು ಜನರ ಉಸಿರು ನಿಲ್ಲಿಸಿ,ಲಕ್ಷಾಂತರ ಜನರ ಬದಕನ್ನ ರಸ್ತೆಗೆ ತಂದಿದ್ದ ಹೆಮ್ಮಾರಿ ಕೊರೊನ ಮತ್ತೆ ವಕ್ಕರಿಸಿಕೊಂಡಿದೆ.
ಭಾರತದಲ್ಲಿ 257 ಪ್ರಕರಣಗಳು ಪತ್ತೆಯಾಗಿವೆ.ಕರ್ನಾಟಕದಲ್ಲಿ 8, ಕೇರಳದಲ್ಲಿ 69, ಮಹಾರಾಷ್ಟ್ರದಲ್ಲಿ 44, ತಮಿಳುನಾಡಿನಲ್ಲಿ 34, ಗುಜರಾತ್ 6, ದೆಹಲಿಯಲ್ಲಿ 3 ಹರಿಯಾಣ, ರಾಜಸ್ಥಾನ, ಸಿಕ್ಕಿಂನಲ್ಲೂ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.ಈಗ ಬಂದಿರುವ ಹೊಸ ತಳಿಯ ಹೆಸರು ಒಮಿಕ್ರಾನ್ ನ ಉಪ ತಳಿಯೆಂದು ಗುರುತಿಸಲಾಗಿದೆ.
ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್-ಪಾಸಿಟಿವ್ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಇಲಾಖೆ, ನಿರ್ಲಕ್ಷ್ಯ ಬೇಡವೆಂದು ಎಚ್ಚರಿಸಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಈಗಾಗಲೇ ಸೂಚಿಸಿದೆ.
ಕೊರೊನಾ ವೈರಾಣುವಿನ ಓಮಿಕ್ರಾನ್ ರೂಪಾಂತರಿಯ 'ಜೆನ್.1' ಉಪತಳಿಯಿಂದ ಏಷ್ಯಾದಲ್ಲಿ ಕೊರೊನ ಸೋಂಕು ಹೆಚ್ಚುತ್ತಿದೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಮೆಡಿಸಿನ್ ತಿಳಿಸಿದೆ.
ಇದಲ್ಲದೇ LF-.7 ಹಾಗೂ NB.1.8 ರೂಪಾಂತರಿಗಳಿಂದಲೂ ಹಾಂಗ್‌ಕಾಂಗ್ ಹಾಗೂ ಸಿಂಗಾಪುರದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ ಎನ್ನಲಾಗಿದೆ.
ಮೊನ್ನೆಯಷ್ಟೇ ಕ್ರಿಕೆಟಿಗ ಟ್ರಾವಿಸ್ ಹೆಡ್ ಗೆ ಕೊರೋನಾ ಪಾಸಿಟಿವ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗಾಗಲೇ ಭಾರತದಲ್ಲಿ 257 ಸಕ್ರಿಯ ಕೇಸ್ ಗಳು ವರದಿಯಾಗಿದೆ.
ಈಗಾಗಲೇ ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ.