ಬೆಂಗಳೂರಿನ ಐಸಿಎಆರ್-IIHR ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ, ರೈತರು-ವಿಜ್ಞಾನಿಗಳೊಂದಿಗೆ ಸಂವಾದ
ಸ್ಥಳೀಯ ಸುದ್ದಿದೇಶ/ವಿದೇಶ


ಬೆಂಗಳೂರಿನ ಐಸಿಎಆರ್-IIHR ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ, ರೈತರು-ವಿಜ್ಞಾನಿಗಳೊಂದಿಗೆ ಸಂವಾದ
ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ರವರು ಇಂದು ಹೆಸರಘಟ್ಟದ ಐಸಿಎಆರ್-IHRಗೆ ಭೇಟಿ ನೀಡಿದರು. ಇವರನ್ನು ಐಸಿಎಆರ್-IIHR ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ ಅವರು ಸ್ವಾಗತಿಸಿದರು.ಬಳಿಕ ಸಚಿವರು ಹಣ್ಣಿನ ಬೆಳೆಗಳ ನರ್ಸರಿ ಪ್ರದೇಶದಲ್ಲಿ ಆರ್ಕ ಉದಯ ಮಾವಿನ ಸಸಿಯನ್ನು ನೆಟ್ಟು, ತಂತ್ರಜ್ಞಾನಗಳಿಂದ ಪ್ರಯೋಜನ ಪಡೆದ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. IIHR ನ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಶ್ಲಾಘಿಸಿದರು.
ಬಳಿಕ ಮಾತನಾಡಿದ ಅವರು, ಸಣ್ಣ ರೈತರ ಆದಾಯವನ್ನು ಹೆಚ್ಚಿಸುವ ಏಕೈಕ ಮಾರ್ಗವೆಂದರೆ ಸಮಗ್ರ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಜೇನು ಸಾಕಣೆಯೊಂದಿಗೆ ಬೆಳೆ ಸಾಕಣೆಯನ್ನು ಸಂಯೋಜಿಸಿದಾಗ ಅವರು ಖಂಡಿತವಾಗಿಯೂ ಹೆಚ್ಚಿನದನ್ನು ಗಳಿಸಬಹುದು.
ಸುಸ್ಥಿರತೆ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ತೋಟಗಾರಿಕಾ ಬೆಳೆಗಳೊಂದಿಗೆ ಬೆಳೆಗಳ ವೈವಿದ್ಯೀಕರಣ ಅತ್ಯಗತ್ಯ.
AICRP ವ್ಯವಸ್ಥೆಗಳ ಅಡಿಯಲ್ಲಿ ಬಿಡುಗಡೆ ಮಾಡುವ ಮೊದಲು ಪ್ರಭೇದಗಳು/ಮಿಶ್ರತಳಿಗಳ ಮೌಲ್ಯಮಾಪನಕ್ಕಾಗಿ ವರ್ಷಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ನಮ್ಮ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು (ಆತ್ಮ ನಿರ್ಭರತ).
ರೈತರಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಬೆಳೆಗಳ ಜೀವಿತಾವಧಿಯನ್ನು ಹೆಚ್ಚಿಸುವಂತೆ ಸಚಿವರು ವಿಜ್ಞಾನಿಗಳನ್ನು ಒತ್ತಾಯಿಸಿದರು. ರೈತರ ಆದಾಯವನ್ನು ಹೆಚ್ಚಿಸುವ ಪ್ರಭೇದಗಳು ಮತ್ತು ತಂತ್ರಜ್ಞಾನಗಳನ್ನು ಅವಿಷ್ಕರಿಸುವ ಅಗತ್ಯವಿದೆ. ರೈತರ ತರಬೇತಿಯನ್ನು ತೀವ್ರಗೊಳಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಐಸಿಎಆರ್-IIHR ನ ಮುಖ್ಯಸ್ಥರು, ವಿಜ್ಞಾನಿಗಳು ಮತ್ತು ರೈತರು ಉಪಸ್ಥಿತರಿದ್ದರು.