ಜುಬಿಲೆಂಟ್ ಮೋಟರ್ವಕ್ಸ್ ವೈಟ್‌ಫೀಲ್ಡ್ ನಲ್ಲಿ ನೂತನ ಮಹೀಂದ್ರಾ ಶೋರೂಮ್ ಗ್ರಾಂಡ್ ಓಪನ್‌.ಮಹೀಂದ್ರಾ XEV 9S ಮತ್ತು XUV 7XO ಬುಕ್ಕಿಂಗ್ ಆರಂಭ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/19/20261 min read

ಬೆಂಗಳೂರು: ಜುಬಿಲೆಂಟ್ ಮೋಟರ್ವಕ್ಸ್್ರ ಇಂದು ಪೂರ್ವ ಬೆಂಗಳೂರಿನ ಹೋಪ್‌ಫಾರ್ಮ್, ವೈಟ್‌ಫೀಲ್ಡ್‌ನಲ್ಲಿರುವ ತನ್ನ ಡೀಲರ್‌ಶಿಪ್‌ನಲ್ಲಿ ಎರಡು ಮಹೀಂದ್ರಾ ವಾಹನಗಳನ್ನು ಅನಾವರಣಗೊಳಿಸಿದೆ. ಈ ಪ್ರದರ್ಶನವು ಈ ಭಾಗದ ಗ್ರಾಹಕರಿಗೆ ಮಹೀಂದ್ರಾದ ಇತ್ತೀಚಿನ SUV ಪೋರ್ಟ್‌ಫೋಲಿಯೊವನ್ನು ಹತ್ತಿರದಿಂದ ಅನುಭವಿಸುವ ಅವಕಾಶವನ್ನು ನೀಡುವುದರೊಂದಿಗೆ, ವಿಶ್ವಮಟ್ಟದ ಮತ್ತು ಪ್ರೀಮಿಯಂ ಬ್ರಾಂಡ್ ಅನುಭವವನ್ನು ಒದಗಿಸುವ ಮಹತ್ವದ ಕ್ಷಣವಾಗಿದೆ.

ಆಧುನಿಕ, ಪ್ರೀಮಿಯಂ ಮತ್ತು ಗ್ರಾಹಕ ಕೇಂದ್ರಿತ ವಾತಾವರಣವನ್ನು ರೂಪಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಹೋಪ್‌ಫಾರ್ಮ್ ಶೋರೂಮ್, ತಂತ್ರಜ್ಞಾನ, ನವೀನತೆ ಮತ್ತು ಆಕರ್ಷಕ ಅನುಭವಗಳ ಮೇಲೆ ಮಹೀಂದ್ರಾದ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಡಿಜಿಟಲ್ ಟಚ್‌ಪಾಯಿಂಟ್‌ಗಳು, ತಜ್ಞರ ಸಲಹೆ ಮತ್ತು ವೈಯಕ್ತಿಕ ಸೇವೆಗಳೊಂದಿಗೆ ಸಂಯೋಜಿತವಾದ ಈ ಸಮಕಾಲೀನ ವಾತಾವರಣದಲ್ಲಿ ಗ್ರಾಹಕರು ಮಹೀಂದ್ರಾದ ಹೊಸ ತಲೆಮಾರಿನ SUVಗಳನ್ನು ಅನ್ವೇಷಿಸಬಹುದು.

ಮಹೀಂದ್ರಾದ ಬಹು ನಿರೀಕ್ಷಿತ SUVಗಳಲ್ಲಿ ಎರಡು - ಮಹೀಂದ್ರಾ XEV 9S ಮತ್ತು ಮಹೀಂದ್ರಾ XUV 7XO-ಗಳ ಅನಾವರಣವು ಬೆಂಗಳೂರಿನ ಪ್ರೀಮಿಯಂ ಹಾಗೂ ತಂತ್ರಜ್ಞಾನ ಆಧಾರಿತ SUV ವಿಭಾಗದಲ್ಲಿ ಮಹೀಂದ್ರಾದ ಹಾಜರಾತಿಯನ್ನು ಇನ್ನಷ್ಟು ಬಲಪಡಿಸುತ್ತದೆ.

ಭಾರತದಲ್ಲಿ ₹13.66 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಗೆ ಬಿಡುಗಡೆಯಾದ ಮಹೀಂದ್ರಾ XUV 7XO, ಉನ್ನತ ಎಂಜಿನಿಯರಿಂಗ್, ಡಿಜಿಟಲ್ ಬುದ್ದಿಮತ್ತೆ ಮತ್ತು ಆರಾಮವನ್ನು ಒಟ್ಟುಗೂಡಿಸಿದೆ. ಇದರಲ್ಲಿ ಮಹೀಂದ್ರಾದ DAVINCI ಸಸ್ಪೆನ್, Qualcomm SA8155P ಆಧಾರಿತ ADRENOX+ ಡಿಜಿಟಲ್ ಇಕೋಸಿಸ್ಟಮ್, ವೈರ್‌ಲೈಸ್ Android Auto ಮತ್ತು Apple CarPlay ಹೊಂದಿದ 31.24 ಸೆಂ.ಮೀ ಟ್ರಿಪಲ್-ಸ್ಟ್ರೀನ್ ಕಾಕ್‌ಪಿಟ್, Dolby Atmos ಮತ್ತು Dolby Vision ಸಹಿತ 16 ಸ್ಪೀಕರ್ Harman Kardon ಅಡಿಯೋ ಸಿಸ್ಟಮ್, ChatGPT ಏಕೀಕರಣದೊಂದಿಗೆ Alexa ಇನ್-ಬಿಲ್ಟ್, ಮತ್ತು 75ಕ್ಕಿಂತ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು ಸೇರಿದ್ದು, ಭವಿಷ್ಯನಿರ್ದಿಷ್ಟ ಹಾಗೂ ಸುರಕ್ಷಿತ ಚಾಲನಾ ಅನುಭವವನ್ನು ಒದಗಿಸುತ್ತದೆ.

ಈ ಎರಡು ಹೊಸ ಲಾಂಚ್‌ಗಳೊಂದಿಗೆ, ಪೂರ್ವ ಬೆಂಗಳೂರಿನ ಗ್ರಾಹಕರಿಗೆ ಅತ್ಯಾಧುನಿಕ SUVಗಳನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗಿಸುವುದರ ಜೊತೆಗೆ, ಶ್ರೇಷ್ಠ ಮಾಲೀಕತ್ವ ಮತ್ತು ಸೇವಾ ಅನುಭವವನ್ನು ನೀಡುವ ಮಹೀಂದ್ರಾದ ಬದ್ಧತೆಯನ್ನು ಜುಬಿಲೆಂಟ್ ಮೋಟರ್ವಕ್ಸ್ ಮತ್ತೊಮ್ಮೆ ದೃಢಪಡಿಸುತ್ತದೆ.

ಜುಬಿಲೆಂಟ್ ಮೋಟರ್ವಕ್ಸ್ ಪ್ರೈವೇಟ್‌ ಲಿಮಿಟೆಡ್‌ (JMPL) ಜುಬಿಲೆಂಟ್ ಭಾರ್ತಿಯಾ ಗ್ರೂಪ್‌ನ ಆಟೋಮೊಬೈಲ್ ಚಿಲ್ಲರೆ ವಿಭಾಗವಾಗಿದ್ದು, ಭಾರತದ ಪ್ರಮುಖ ಆಟೋಮೊಬೈಲ್ ರಿಟೇಲ್ ಕಂಪನಿಗಳಲ್ಲೊಂದಾಗಿದೆ. 2009ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಗ್ರಾಹಕ-ಪ್ರಥಮ ತತ್ವ ಮತ್ತು ಆಧುನಿಕ ರಿಟೇಲ್ ಮಾನದಂಡಗಳೊಂದಿಗೆ ವೇಗವಾಗಿ ಬೆಳೆಯುತ್ತಿದೆ.

15 ನಗರಗಳಲ್ಲಿ 70ಕ್ಕಿಂತ ಹೆಚ್ಚು ಸೌಲಭ್ಯಗಳು ಮತ್ತು ಒಂದು ಮಿಲಿಯನ್‌ಗೂ ಅಧಿಕ ಗ್ರಾಹಕರಿಗೆ ಸೇವೆ ನೀಡಿರುವ ಜುಬಿಲೆಂಟ್ ಮೋಟರ್ವಕ್ಸ್, ತನ್ನ ಪ್ರೀಮಿಯಂ ಶೋರೂಮ್ ಅನುಭವ, ಬಲಿಷ್ಠ ಆಕ್ಟರ್-ಸೇಲ್ಸ್ ಬೆಂಬಲ ಮತ್ತು ಪರಿಣಾಮಕಾರಿ ನಿರ್ವಹಣಾ ಕ್ರಮಗಳಿಗಾಗಿ ಗುರುತಿಸಿಕೊಂಡಿದೆ. ನವೀನತೆ, ಕಾರ್ಯಾಚರಣಾ ಶ್ರೇಷ್ಠತೆ ಮತ್ತು ದೀರ್ಘಕಾಲೀನ ಮೌಲ್ಯ ಸೃಷ್ಟಿಯ ಮೇಲೆ ಸ್ಪಷ್ಟ ಗಮನದೊಂದಿಗೆ ಸಂಸ್ಥೆ ತನ್ನ ವಿಸ್ತರಣೆಯನ್ನು ಮುಂದುವರಿಸುತ್ತಿದೆ.