ಲಕ್ಕುಂಡಿಯಲ್ಲಿ ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯಲ್ಲಿ 1 ಕೆ.ಜಿ ನಿಧಿ ಪತ್ತೆ!
ಜಿಲ್ಲಾ ಸುದ್ದಿ


ಗದಗ: ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯೊಂದರಲ್ಲಿ ಒಂದು ಕೆ.ಜಿಯಷ್ಟು ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 4ನೇ ವಾರ್ಡಿನ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಗೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ನಿಧಿ ಸಿಕ್ಕಿದ್ದರಿಂದ ಗ್ರಾಮಸ್ಥರು ತಂಡೋಪ ತಂಡವಾಗಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಅಂದಾಜು ಅರ್ಧ ಕೆಜಿಗೂ ಅಧಿಕ ತೂಕದ ಪುರಾತನ ಕಾಲದ ಚಿನ್ನಾಭರಣಗಳು, ಬಂಗಾರದ ನಾಣ್ಯಗಳು ದೊರೆತಿದ್ದು, ಸ್ಥಳಕ್ಕೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದೊರೆತ ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ ನಂತರ ತಿಳಿಯಲಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸ್ಯದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.