ಮೆಡಿಕವರ್ ಆಸ್ಪತ್ರೆಯಲ್ಲಿ 100 ರೋಬೋಟಿಕ್ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗಳು ಯಶಸ್ವಿ

ಜಿಲ್ಲಾ ಸುದ್ದಿ

ಧರ್ಮ ಬಸವನಪುರ.

1/14/20261 min read

ಬೆಂಗಳೂರು: ಮೆಡಿಕವರ್ ಆಸ್ಪತ್ರೆ 100 ರೋಬೋಟಿಕ್ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿ, ಉನ್ನತ ಆರ್ಥೋಪೆಡಿಕ್ ಚಿಕಿತ್ಸೆಯಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಆಸ್ಪತ್ರೆಯ ಆರ್ಥೋಪೆಡಿಕ್ ಮತ್ತು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ತಂಡವು ಅತ್ಯಂತ ನಿಖರ, ಕಡಿಮೆ ನೋವು, ಬೇಗ ಗುಣಮುಖತೆ ಮತ್ತು ಉತ್ತಮ ಚಲನೆ ಶಕ್ತಿ ದೊರಕುತ್ತಿದೆ

ಮೆಡಿಕವರ್‌ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಡಾ. ಆರ್. ಡಿ. ಚಕ್ರವರ್ತಿ, ನಿರ್ದೇಶಕರು, ಆರ್ಥೋಪೆಡಿಕ್ & ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಡಾ. ಸಂಜಯ ಪ್ರಸಾದ್ ಹೆಗ್ಡೆ, ಹಿರಿಯ ಸಲಹೆಗಾರ – ಆರ್ಥೋಪೆಡಿಕ್, ಜಾಯಿಂಟ್ ರಿಪ್ಲೇಸ್ಮೆಂಟ್, ಸ್ಪೋರ್ಟ್ ಮೆಡಿಸಿನ್ ಮತ್ತು ಆರ್ತ್ರೋಸ್ಕೋಪಿ, ಡಾ. ರಾಘವೇಂದ್ರ ರೆಡ್ಡಿ, ಜಾಯಿಂಟ್ ಮತ್ತು ಸ್ಪೋರ್ಟ್ ಮೆಡಿಸಿನ್ ತಜ್ಞ, ಕೃಷ್ಣಮೂರ್ತಿ, ಆಸ್ಪತ್ರೆ ಮುಖ್ಯಸ್ಥರು ಭಾಗಿಯಾಗಿದ್ದರು.

ಡಾ. ಆರ್. ಡಿ. ಚಕ್ರವರ್ತಿ ಅವರು ಮಾತನಾಡಿ,“100 ಯಶಸ್ವಿ ರೋಬೋಟಿಕ್ ಗಂಟುಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿರುವುದು ನಮ್ಮ ಆಸ್ಪತ್ರೆಗೆ ಹೆಮ್ಮೆಯ ವಿಷಯ. ರೋಬೋಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ ದೊರಕುತ್ತಿದ್ದು, ರೋಗಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತಿದೆ,” ಎಂದು ಹೇಳಿದರು.

ಡಾ. ಸಂಜಯ ಪ್ರಸಾದ್ ಹೆಗ್ಡೆ ಅವರು, “ರೋಬೋಟಿಕ್ ಗಂಟುಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಪ್ರತಿಯೊಬ್ಬ ರೋಗಿಗೆ ಅನುಗುಣವಾಗಿ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ರೋಗಿಗಳು ವೇಗವಾಗಿ ಚಲನೆ ಶಕ್ತಿಯನ್ನು ಮರಳಿ ಪಡೆಯಲು ಸಹಕಾರಿಯಾಗುತ್ತದೆ,” ಎಂದು ತಿಳಿಸಿದರು.

ಕೃಷ್ಣಮೂರ್ತಿ, ಆಸ್ಪತ್ರೆ ಮುಖ್ಯಸ್ಥರು, ಮಾತನಾಡಿ, “ಈ ಸಾಧನೆ ಮೆಡಿಕವರ್ ಆಸ್ಪತ್ರೆಯ ಉನ್ನತ ವೈದ್ಯಕೀಯ ತಂತ್ರಜ್ಞಾನ ಮತ್ತು ಗುಣಮಟ್ಟದ ಚಿಕಿತ್ಸೆಯ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂದೆಯೂ ರೋಗಿಗಳಿಗೆ ವಿಶ್ವಮಟ್ಟದ ಆರ್ಥೋಪೆಡಿಕ್ ಚಿಕಿತ್ಸೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದರು.

ಮೆಡಿಕವರ್ ಆಸ್ಪತ್ರೆಯ ಆರ್ಥೋಪೆಡಿಕ್ ವಿಭಾಗವು ಮುಂದುವರಿದು ಜಾಯಿಂಟ್ ರಿಪ್ಲೇಸ್ಮೆಂಟ್, ಆರ್ತ್ರೋಸ್ಕೋಪಿ ಮತ್ತು ಸ್ಪೋರ್ಟ್ ಮೆಡಿಸಿನ್ ಚಿಕಿತ್ಸೆಯಲ್ಲಿ ಉನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತಿದೆ.