ಕನ್ನಮಂಗಲ ಗ್ರಾ ಪಂ ಅಧ್ಯಕ್ಷರ ವಿರುದ್ಧ 12 ಸದಸ್ಯರ ಅವಿಶ್ವಾಸ ಗೊತ್ತುವಳಿ ಮಂಡನೆ.ಅಧ್ಯಕ್ಷರ ಪದಚ್ಯುತಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/18/20251 min read

ಮಹದೇವಪುರ: ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿಮಹದೇವಪುರ. ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷರನ್ನ ಪದಚ್ಯುತಿಗೊಳಿಸಲಾಗಿದೆ.

16 ಸದಸ್ಯರ ಪೈಕಿ ಅವಿಶ್ವಾಸದ ಪರ 12 ಮತಗಳು ಬಂದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು. ಉಪವಿಭಾಗಾಧಿಕಾರಿ ಕಿರಣ್ ನೇತೃತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ನಡೆಯಿತು. ಪಕ್ಷ ಬೇದ ಮರೆತು 12 ಸದಸ್ಯರು ಹಾಲಿ ಅಧ್ಯಕ್ಷೆ ಪವಿತ್ರ ರವಿ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷೆ ಪವಿತ್ರ ರವಿ ಸೇರಿ ನಾಲ್ಕು ಸದಸ್ಯರು ಸಭೆಗೆ ಗೈರಾಗಿದ್ದರು. ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ಅಧ್ಯಕ್ಷರ ಸ್ಥಾನದಿಂದ ಪವಿತ್ರ ಪದಚ್ಯುತಗೊಂಡಿದ್ದಾರೆ.ನೂತನ ಅಧ್ಯಕ್ಷರ ಆಯ್ಕೆಗೆ ಸದ್ಯದಲ್ಲೇ ದಿನಾಂಕ ನಿಗದಿಪಡಿಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೇ ಪವಿತ್ರ ರವಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ,ಮತ್ತು ಹಿಟ್ಲರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರ ತೆರಿಗೆಯ ಕೋಟ್ಯಾಂತರ ಹಣವನ್ನು ಲಪಾಟಯಿಸಲು ಗ್ರಾ.ಪಂ ಸದಸ್ಯ ಲಿಂಗಾರಾಜು ಅರಸುರೊಂದಿಗೆ ಸಂಚು ರೂಪಿಸಿದರು. ಇದ್ದರಿಂದ ಬೇಸತ್ತು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬೆಳತೂರು ಯಲ್ಲಪ್ಪ ತಿಳಿಸಿದ್ದಾರೆ.