ಕೆ.ಆರ್.ಪುರ ವಲಯದಲ್ಲಿ 150 ಕೋಟಿ ಕಮರ್ಷಿಯಲ್ ತೆರಿಗೆ ಬಾಕಿ. ಅಧಿಕಾರಿಗಳಿಂದ ಅಂಗಡಿ ಮುಗ್ಗಟ್ಟಿಗೆ ಬೀಗ ಮುದ್ರೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/4/20261 min read

ಕೆ.ಆರ್.ಪುರ: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಪ್ರಸ್ತಕ ಆರ್ಥಿಕ ವರ್ಷದಲ್ಲಿ 6500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಕ್ರಮಗಳ ಜಾರಿಗೆಗೆ ಮುಂದಾಗಿದೆ. ಅದರ ಬೆನ್ನಲ್ಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಸ್ವತ್ತುಗಳಿಗೆ, ಹಾಗೂ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಕೆ.ಆ‌ರ್.ಪುರ ವಲಯ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಾಣಿಜ್ಯ ಕಟ್ಟಡಗಳಿಗೆ ವಲಯ ಜಂಟಿ ಆಯುಕ್ತ ಡಾ. ಸುಧಾ ನೇತೃತ್ವದಲ್ಲಿ ಕಂದಾಯ ವಸೂಲಾತಿ ತಂಡವು ವಾಣಿಜ್ಯ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿದರು.

ಕಂದಾಯ ವಸೂಲಾತಿ ಸೀಲಿಂಗ್ ಕಾರ್ಯಾಚರಣೆಯಲ್ಲಿ 76 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಆ ಪೈಕಿ 16 ಸ್ವತ್ತುಗಳ ಆಸ್ತಿ ಮಾಲಿಕರು ಸ್ಥಳದಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸಿದರು. ಇನ್ನುಳಿದ 60 ಸ್ವತ್ತುಗಳಿಗೆ ಬೀಗ ಹಾಕುವ ಮೂಲಕ ಸ್ವತ್ತಿನ ಮಾಲೀಕರಿಂದ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕ್ರಮವಹಿಸಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು.

ಕೆಆರ್.ಪುರ ವಲಯದಲ್ಲಿ ಒಟ್ಟು 150 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.ಈಗಾಗಲೇ ಕಳೆದ ಎರಡು ತಿಂಗಳಿಂದ ನೋಟಿಸ್ ನೀಡಲಾಗಿದೆ. ನೋಟೀಸ್ ನೋಡಿ ಕೆಲವರು ಪಾವತಿಗೆ ಮುಂದಾಗಿದ್ದಾರೆ.ಇನ್ನೂ ಯಾರು ಪಾವತಿ ಪಡದೇ ಇದ್ದಾರೆ ಅವರಿಗೆ ನಮ್ಮ ತಂಡದೊಂದಿಗೆ ನೇರವಾಗಿ ಬಂದು ಬೀಗಮುದ್ರೆ ಹಾಕಲಾಗಿದೆ ಎಂದರು.ಆಸ್ತಿದಾರರಿಗೆ ನಮ್ಮ ತಂಡ ಕರೆ ತೆರಿಗೆ ಕಟ್ಟುವಂತೆ ತಿಳಿಸಿದ್ದಾರೆ ಹಾಗೂ ತೆರಿಗೆ ಕಟ್ಟದೆ ಇರುವವರಿಗೆ ಬೇಗ ಮುದ್ರೆ ಹಾಕಲಾಗುತ್ತೆ ಎಂದು ಈಗಾಗಳೆ ತಿಳಿಸಿದ್ದಾರೆ.ನಾವು ಒಮ್ಮೆಲೆ ಬಂದು ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಸ್ಪಷ್ಟನೆ ತಪ್ಪಲಿದೆ.

ಕೆಆರ್.ಪುರ ವಿಭಾಗದಲ್ಲಿ ಸುಮಾರು 2 ಸಾವಿರ ಜನ ಕಮರ್ಷಿಯಲ್ ಟ್ಯಾಕ್ಸ್ ಅನ್ನು ಬಾಕಿ ಉಳಿಸಿಕೊಂಡಿದ್ದಾರೆ ಅವರಾಗಿ ಬಂದು ತೆರಿಗೆ ಕಟ್ಟಿದರೆ ನಾವು ಅವರ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಕೊಡುವ ಕೆಲಸ ತಪ್ಪುತ್ತೆ.ಇಲ್ಲದಿದ್ದರೆ ಬೀಗ ಮುದ್ರೆ ಕಾರ್ಯವನ್ನ ಸತತವಾಗಿ ಮುಂದುವರಿಸಲಾಗುತ್ತೆ ಎಂದರು.

ದಯವಿಟ್ಟು ಯಾರೆಲ್ಲಾ ತೆರಿಗೆ ಪಾವತಿ ಬಾಕಿ ಇಟ್ಟುಕೊಂಡಿದ್ದಿರಾ ತಾವಾಗಿಯೇ ಬಂದು ಪಾವತಿ ಮಾಡಿ ನಮಗೆ ಜಿಬಿಎ ಕೆಲಸ ಸಾಕಷ್ಟು ಇದೆ.ತೆರಿಗೆ ವಸೂಲಿ ಮಾಡುತ್ತಾ ಇದ್ದರೆ ಬೇರೆ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುತ್ತೆ ಆದರಿಂದ ನೀವು ನಿಮ್ಮ ಕೆಲಸ ಮಾಡಿ ನಾವು ನಮ್ಮ ಕೆಲಸ ಮಾಡಬೇಕು ಎಂದರು.

ಪುಟ್ ಪಾತ್ ತೆರವು ಕಾರ್ಯಚರಣೆ ಮಾಡಲಾಗುತ್ತಿದೆ.ಯಾರಲ್ಲಾ ಅತಿಕ್ರಮಣ ಮಾಡಿದ್ದಾರೋ ಅವರಿಗೂ ದಂಡ ಹಾಕಲಾಗುತ್ತಿದೆ ಎಂದರು.

ನಂತರ ಕೆ.ಆರ್.ಪುರ ವಲಯದ ಆರ್ ಓ ಬಸವರಾಜ್ ಮಗ್ಗಿ ಯವರು ಮಾತನಾಡಿ ಈ ಮೂಲಕ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಮನೆ ಹಾಗೂ ವಾಣಿಜ್ಯ ಸತ್ತುಗಳ ಆಸ್ತಿ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಯಾರೆಲ್ಲ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಿ ಅವರೆಲ್ಲ ನಿಗದಿತ ಸಮಯದೊಳಗೆ ಪಾವತಿಸಿದರೆ ಜಿಬಿಎ ಕ್ರಮಕ್ಕೆ ಒಳಗಾಗುವುದು ತಪ್ಪಲಿದೆ ಎಂದು ಮನವಿ ಮಾಡಿದರು.

ನಮಗೆ ಸಾಕಷ್ಟು ಕೆಲಸಗಳು ಇದ್ದರೂ ಅವನೆಲ್ಲ ಬಿಟ್ಟು ತೆರಿಗೆ ವಸೂಲಿ ಮಾಡಬೇಕಾಗಿದೆ.ಯಾರಲ್ಲಾ ಬಾಕಿ ಉಳಿಸಿಕೊಂಡಿದ್ದಾರೆ ಬೇಗ ತೆರಿಗೆಯನ್ನು ಕಟ್ಟಿ ನಾವು ನಿಮ್ಮ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡುವಂತಹ ಕೆಲಸ ತಂದುಕೊಳ್ಳಬೇಡಿ ಎಂದರು.